ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಮಹಾಮಾರಿ ಸಂಕಷ್ಟದ ನಡುವೆಯೂ, ಕೆಎಂಎಫ್ ಹಾಲು ಒಕ್ಕೂಟಗಳು ಹಾಲಿನ ಖರೀದಿ ದರವನ್ನು ಇಳಿಸುತ್ತಿವೆ.
ಸರ್ಕಾರ ಮೂರು ತಿಂಗಳಿನಿಂದ ಪ್ರೋತ್ಸಾಹಧನ ನೀಡದೇ ಇರುವುದರಿಂದ ಹಾಲು ಉತ್ಪಾದಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊರೊನಾ ರಾಜ್ಯಕ್ಕೆ ಬಂದ ನಂತರ ನಂದಿನಿ ಹಾಲು ಮತ್ತು ಉಪ ಉತ್ಪನ್ನಗಳ ಮಾರಾಟ ಪ್ರಮಾಣ ತೀವ್ರವಾಗಿ ಕುಸಿದಿದೆ. ಇದರ ಪರಿಣಾಮ ರೈತರ ಮೇಲೆ ನೇರ ಪರಿಣಾಮ ಬೀರಿದೆ.
ಧಾರವಾಡ ಹಾಲು ಒಕ್ಕೂಟ ಬಿಟ್ಟರೆ ಉಳಿದ 13 ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ 2ರಿಂದ 5 ತನಕ ಕಡಿಮೆ ಮಾಡಿವೆ. ಪ್ರತಿ ಲೀಟರ್‌ಗೆ 5 ಪ್ರೋತ್ಸಾಹಧನ ನೀಡುತ್ತಿದ್ದ ರಾಜ್ಯ ಸರ್ಕಾರ, 345 ಕೋಟಿ ಬಾಕಿ ಉಳಿಸಿಕೊಂಡಿದೆ.
ಇನ್ನು ಹಾಲಿನ ಉತ್ಪಾದನೆ ಅತ್ಯಂತ ಹೆಚ್ಚಳವಾಗಿದೆ. ಸಂಗ್ರಹವಾದ ಹಾಲಿನಲ್ಲಿ ದಿನಕ್ಕೆ 35 ಲಕ್ಷ ಲೀಟರ್ ಉಳಿಯುತ್ತಿದ್ದು, ಇದನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಹಾಲಿನ ಪುಡಿಗೂ ಈಗ ಮಾರುಕಟ್ಟೆ ಇಲ್ಲ. ಮುಂಬೈ, ಹೈದರಾಬಾದ್ ಸೇರಿ ನೆರೆ ರಾಜ್ಯದ ದೊಡ್ಡ ನಗರಗಳಲ್ಲಿ ಹಾಲಿನ ಪುಡಿಗೆ ಇದ್ದ ಬೇಡಿಕೆ ಕೊರೊನಾ ಕಾರಣ ಸಂಪೂರ್ಣ ಕುಸಿದಿದೆ. 1 ಕೆ.ಜಿ ಹಾಲಿನ ಪುಡಿಗೆ 260 ಇದ್ದ ದರ ಈಗ 130 ರೂಪಾಯಿಗನಷ್ಟ ಸರಿದೂಗಿಸಿಕೊಳ್ಳಲು ಹಾಲಿನ ಖರೀದಿ ದರ ಕಡಿಮೆ ಮಾಡಬೇಕಾಗಿದೆ. ಹಾಲಿನ ಪುಡಿ ದರ ಏರಿಕೆಯಾಗದಿದ್ದರೆ ರೈತರಿಗೆ ಲೀಟರ್ ಹಾಲಿಗೆ ನೀಡುತ್ತಿರುವ ಮೊತ್ತವನ್ನು ಮತ್ತಷ್ಟು ಕಡಿಮೆ ಮಾಡವ ಸಾಧ್ಯತೆಯೂ ಇದೆ.
ಇನ್ನು ರೈತರಿಗೆ ಸಿಗಬೇಕಾದ ಪ್ರೋತ್ಸಾಹಧನ ಕೂಡ ಸಿಕ್ಕಿಲ್ಲ. ಲೀಟರ್‌ಗೆ 5ರಂತೆ ತಿಂಗಳಿಗೆ ಸರಾಸರಿ 115 ಕೋಟಿ ಪ್ರೋತ್ಸಾಹಧನವನ್ನು ಸರ್ಕಾರ ನೀಡಬೇಕಿದೆ.