ಡಿವಿಜಿ ಸುದ್ದಿ, ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಹಿರೇಮಠದ ಕೇದರಾಲಿಂಗ ಶಿವ ಶಾಂತ ವೀರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಫೆ. 09 ರಂದು ಹಿರಿಯ ನ್ಯಾಯವಾದಿ, ಸಾಹಿತಿ ಡಾ. ರೇವಣ್ಣ ಬಳ್ಳಾರಿ ಅವರಿಗೆ ‘ಶ್ರೀ ಕೇದಾರೇಶ್ವರ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ರೇವಣ್ಣ ಬಳ್ಳಾರಿ ಅವರಿಗೆ ‘ಡಾಕ್ಟರ್ ಆಫ್ ರಿಲೀಜಿಯಸ್ ಅಂಡ್ ಲಿಟ್ರೇಚರ್ ಗೌರವ ನೀಡಿದ ಹಿನ್ನೆಲೆ ಶ್ರೀ ಮಠದಿಂದ ಫೆ. 09 ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ಬೆಳದಿಂಗಳ ಕವಿಗೋಷ್ಠಿಯಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.



