Connect with us

Dvgsuddi Kannada | online news portal | Kannada news online

ಕೊರೊನಾ ಚಿಕಿತ್ಸೆ: ಖಾಸಗಿ ಆಸ್ಪತ್ರೆಗಳಿಗೆ  ದರ ನಿಗದಿಪಡಿಸಿದ ಸರ್ಕಾರ

ಆರೋಗ್ಯ

ಕೊರೊನಾ ಚಿಕಿತ್ಸೆ: ಖಾಸಗಿ ಆಸ್ಪತ್ರೆಗಳಿಗೆ  ದರ ನಿಗದಿಪಡಿಸಿದ ಸರ್ಕಾರ

ಡಿವಿಜಿ ಸುದ್ದಿ, ಬೆಂಗಳೂರು:  ರಾಜ್ಯದಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಖಾಸಗಿ ಆಸ್ಪತ್ರೆಗಳಲ್ಲಿ  ಚಿಕಿತ್ಸಾ ದರವನ್ನು ಸರ್ಕಾರ ನಿಗದಿ ಮಾಡಿದೆ.

ಖಾಸಗಿ ಆಸ್ಪತ್ರೆಗಳ ಶೇ 50ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಮೀಸಲಿಡುವುದನ್ನು ಕಡ್ಡಾಯಗೊಳಿಸಲಾಗಿದೆ. ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರು ಈ ಆದೇಶ ಹೊರಡಿಸಿದ್ದಾರೆ.

ಸರ್ಕಾರ ಕಳುಹಿಸುವ ರೋಗಿಗಳಿಗೆ ದಿನಕ್ಕೆ ಜನರಲ್ ವಾರ್ಡ್‌ಗೆ 5,000, ಎಚ್ ಡಿಯು 7,000, ಐಸಿಯು 8,500 ಹಾಗೂ ವೆಂಟಿಲೇಟರ್ ಇರುವ ಐಸಿಯುಗೆ 10,000 ದರ ನಿಗದಿಪಡಿಸಲಾಗಿದೆ.

ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ಒಳಪಟ್ಟರೆ ಅವರಿಂದ ಜನರಲ್ ವಾರ್ಡ್‌ಗೆ ದಿನಕ್ಕೆ 10,000, ಎಚ್ ಡಿ ಯು 12,000, ಐಸಿಯು 15,000 ಹಾಗೂ ವೆಂಟಿಲೇಟರ್ ಸಹಿತ ಐಸಿಯುಗೆ 25,000 ದರ ನಿಗದಿ ಮಾಡಿದೆ.

ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್ ಬಿಲ್ ಪಾವತಿಯ ನೋಡಲ್ ಏಜೆನ್ಸಿಯಾಗಿದ್ದು, ಬಿಪಿಎಲ್, ಎಪಿಎಲ್, ವಲಸೆ ಕಾರ್ಮಿಕರು ಮತ್ತು ಪಡಿತರ ಚೀಟಿ ಇಲ್ಲದೆ ಇತರ ರಾಜ್ಯಗಳಿಂದ ಬಂದರವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಟ್ರಸ್ಟ್  ಭರಿಸಲಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಆರೋಗ್ಯ

ದಾವಣಗೆರೆ

Advertisement
Advertisement Enter ad code here

Title

To Top