ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ಸಭೆ, ಸಮಾರಂಭಕ್ಕೆ ಸರ್ಕಾರ ನಿಷೇಧ ಹೇರಿದೆ. ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ಸೂಚಿಸಿತ್ತು.ಆದರೆ, ಇದೀಗ ವಿಶ್ವ ವಿಖ್ಯಾತ ಕರಗ ಉತ್ಸವ ನಡೆಸದಂತೆ ಹೈಕೋರ್ಟ್ ತಡೆ ನೀಡಿದೆ.
ಕೇಂದ್ರ ಸರ್ಕಾರದ ಆದೇಶದಂತೆ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿಲ್ಲ. ಹೀಗಾಗಿ ಬೆಂಗಳೂರು ಕರಗ ಸಹ ನಡೆಸುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರ ಆದೇಶ ಪಾಲನೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಮಾಹಿತಿ ನೀಡಿದ್ದಾರೆ. ಹೈಕೋರ್ಟ್ ಇದನ್ನು ದಾಖಲಿಸಿಕೊಂಡಿದ್ದು, ಕರಗ ನಡೆಸದಂತೆ ಆದೇಶ ನೀಡಿದೆ.

ಕೊರೊನಾ ಭೀತಿಯ ನಡುವೆಯೂ ಬೆಂಗಳೂರಿನ ಧರ್ಮರಾಯ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಹಸಿಕರಗ ನಡೆದಿದೆ. ಆದರೆ ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು, ಕರಗದ ಪೂಜಾರಿ, ನಾಲ್ಕು ಜನ ವೀರಕುಮಾರರು ಮಾತ್ರ ಭಾಗಿಯಾಗಿದ್ದರು. ಮುಖ್ಯಮಂತ್ರಿಯವರು ಸರಳವಾಗಿ ಕರಗ ಮಹೋತ್ಸವ ಆಚರಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಸಿ ಕರಗ ಬಹಳ ಸರಳವಾಗಿಯೇ ನಡೆದಿದೆ.
ಕರಗ ಮಹೋತ್ಸವಕ್ಕೂ ಎರಡು ದಿನಗಳ ಹಿಂದೆ ಈ ಹಸಿಕರಗ ನಡೆಯುತ್ತದೆ. ಬುಧವಾರ ರಾತ್ರಿ ಸರಳವಾಗಿ ಧರ್ಮರಾಯನ ದೇವಸ್ಥಾನದಲ್ಲಿ ಸರಳವಾಗಿ ಕರಗ ಮಹೋತ್ಸವ ನಡೆಯುವ ಸಾಧ್ಯತೆ ಇತ್ತು. ಆದರೆ, ಹೈಕೋರ್ಟ್ ಸಂಪೂರ್ಣ ತಡೆ ನೀಡಿದೆ.



