ಡಿವಿಜಿ ಸುದ್ದಿ, ದಾವಣಗೆರೆ: ಕನ್ನಡ ಭಾಷೆಯನ್ನು ಕೇವಲ ಭಾಷೆಯಾಗಿ ಕಲಿಯದೇ ಜೀವನ ಕ್ರಮವನ್ನಾಗಿ ರೂಢಿಸಿಕೊಳಿಸಿಕೊಂಡಾಗ ಮಾತ್ರ ಕನ್ನಡ ಉಳಿಸಿ, ಬೆಳೆಸಲು ಸಾಧ್ಯ ಎಂದು ಕೆನರಾ ಬ್ಯಾಂಕ್ ನ ಕೆ. ರಾಘವೇಂದ್ರ ನಾಯರಿ ಅಭಿಪ್ರಾಯಪಟ್ಟರು.
ನಗರದ ಕೆ.ಆರ್. ಮಾರ್ಕೆಟ್ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ `ಕನ್ನಡ ಸಾಹಿತ್ಯಕ್ಕೆ ಕವಿಗಳ ಕೊಡುಗೆ ` ಕುರಿತು ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರ ಉದ್ಘಾಟಿಸಿ ಮಾತನಾಡಿದರು.
ಬೇರೆ ಭಾಷೆಯನ್ನು ವ್ಯವಹಾರಿಕ ಉದ್ದೇಶಕ್ಕೆ ಕಲಿತು ಕನ್ನಡ ಭಾಷೆಯನ್ನು ಆತ್ಮಾಭಿಮಾನದಿಂದ ದಿನ ನಿತ್ಯದ ಚಟುವಟಿಕೆಯಲ್ಲಿ ಬಳಸಬೇಕು.ಕವಿಗಳು, ಸಾಹಿತಿಗಳ ಜೊತೆಗೆ ಕನ್ನಡಕ್ಕಾಗಿ ಟೊಂಕ ಕಟ್ಟಿ ನಿಲ್ಲುವ ಸಂಘಟಕರ ಅಗತ್ಯವೂ ಇದೆ ಎಂದರು.
ಶಿಕ್ಷಕ ಅಜಯ್ ನಾರಾಯಣ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಹಳೆಗನ್ನಡ ಕವಿಗಳಿಂದ ಹಿಡಿದು ಹೊಸಗನ್ನಡ ನವ್ಯಕಾವ್ಯಗಳ ಕವಿಗಳ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಮಕ್ಕಳು ಮತ್ತು ಯುವಜನತೆ ಸಾಹಿತ್ಯ ಕೃಷಿಯತ್ತ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಸಾಪ ಗೌರವ ಕಾರ್ಯದರ್ಶಿ ಇ.ಎಂ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಕಲ್ಲಪ್ಪ ಅರಳಿ ಮತ್ತು ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ತಾಲ್ಲೂಕು ಕಸಾಪ ನಿರ್ದೇಶಕ ಎಂ. ಷಡಾಕ್ಷರಪ್ಪ ಸ್ವಾಗತಿಸಿದರು. ಸಹ ಶಿಕ್ಷಕ ನಾಗರಾಜ್ ವಂದಿಸಿದರು. ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ನಿರೂಪಿಸಿದರು.



