ಡಿವಿಜಿ ಸುದ್ದಿ, ಉಡುಪಿ: ಕನ್ನಡ ತಾಯಿ ಭಾಷೆಯಂತಿದ್ದು, ಉಪ ಭಾಷೆಗಳಾದ ತುಳು, ಕೊಂಕಣಿ, ಕೊಡವ ಭಾಷೆಗಳ ಜೊತೆ ಹೊಂದಿಕೊಂಡು ಹೋಗುವ ಗುಣ ಹೊಂದಿದೆ ಎಂದು ಸಾಹಿತಿ ಡಾ. ರೇವಣ್ಣ ಬಳ್ಳಾರಿ ಅಭಿಪ್ರಾಯಪಟ್ಟರು.
ಅಜೆಕಾರು ಕುರ್ಪಾಡಿ ಯುವ ವೃಂದ ಆಯೋಜಿಸಿದ್ದ ಆದಿಗ್ರಾಮೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯು ತನ್ನ ಉಪ ಭಾಷೆಗಳಾದ ತುಳು, ಕೊಂಕಣಿ,ಕೊಡವ ಭಾಷೆಯನ್ನು ಮಮತೆಯಿಂದ ಕಾಣುತ್ತಿದೆ. ಕನ್ನಡ ಭಾಷೆ ಉಳುವಿಗಾಗಿ ಅಜೆಕಾರು ಶೇಖರ್ ಕಳೆದ ೨೨ ವರ್ಷಗಳಿಂದ ಆದಿಗ್ರಾಮೋತ್ಸವ ನಡೆಸಿಕೊಂಡು ಬಂದಿರುವುದು ಖುಷಿ ಕೊಟ್ಟಿದೆ ಎಂದರು.

ದ್ರಾವಿಡ ಭಾಷೆ ಪರಂಪರೆಯಲ್ಲಿ ತುಳು ಭಾಷೆಯ ಕೊಡುಗೆ ಅಪಾರವಾಗಿದೆ. ಕನ್ನಡ ಭಾಷೆಯು ಸಿರಿಗನ್ನಡ ಅನ್ನಿಸಿಕೊಳ್ಳಲು ತುಳು ಭಾಷೆಯು ಒಂದು ಕಾರಣ ಎಂದು ತುಳು ಭಾಷೆಯ ಆಕಾಡೆಮಿ ಸದಸ್ಯ ಡಾ.ಹರೀಶ್ ರಾಜ್ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕೋಗಿಲೆ, ಕವಿ ಗೋಷ್ಠಿ, ಗಾಯನ ಸ್ಪರ್ಧೆ, 12 ಸಾಧಕರಿಗೆ ಸನ್ಮಾನಿಸಿಲಾಯಿತು. ಮಂಗಳೂರಿನ ಪ್ರೀತಿ ರೈ, ಧರ್ಮದರ್ಶಿ ಹರಿಕೃಷ್ಣ ಪುರೂರು, ಗ್ರಾಮೋತ್ಸವ ಸಮಿತಿಯ ಅಧ್ಯಕ್ಷ ಶೇಖರ್ ಅಜೇಕರ್ ಸೇರಿದಂತೆ ಮತ್ತಿತರರು ಉಪಸ್ಥಿತಿರಿದ್ದರು.



