ಡಿವಿಜಿ ಸುದ್ದಿ, ದಾವಣಗೆರೆ : ವಿಶ್ವ ವೀರಶೈವ ಲಿಂಗಾಯತ ಪರಿಷತ್, ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್, ಸಮಗ್ರ ಸಾಹಿತ್ಯ ವೇದಿಕೆ, ಸಿರಿಗನ್ನಡ ವೇದಿಕೆ ವತಿಯಿಂದ ನಗರದ ರೋಟರಿ ಬಾಲ ಭವನದಲ್ಲಿ 64ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಶಾಂತಗಂಗಾಧರ್, ಸಾಲುಮರದ ವೀರಾಚಾರಿ, ನಟ ಜಯಕುಮಾರ್ ಕೊಡಗನೂರು ಅವರಿಗೆ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ರೇವಣ್ಣ ಬಳ್ಳಾರಿ ಮಾತಾಡಿ, ಎಲೆಮರೆ ಕಾಯಿಯಂತಿರುವ ಸಾಹಿತಿಗಳಿಗೆ ವೇದಿಕೆ ಕಲ್ಪಿಸುವ ಕಾಯಕದಿಂದ ಸಿಗುವ ಆನಂದ ಅಷ್ಟಿಷ್ಟಲ್ಲ. ಕನ್ನಡ ದ್ವಾಪರ ಕಾಲದಿಂದಲೂ ಇದೆ ಎಂದರು.

ಆನಂದ್ ಋಗ್ವೇದಿ ಮಾತಾಡಿ ಕನ್ನಡ ಕಲಿಸುವುದೇ ಕಷ್ಟ, ಸುಲಭ ಭಾಷೆ ಆದರು, ಕಲಿಯಲು ಆಸಕ್ತಿ ಯಾರಿಗೂ ಇಲ್ಲ. ಕನ್ನಡ ಭವಿಷ್ಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ತ್ರೀ ಭಾಷ ಸೂತ್ರ ಅನುಸರಿಸಿ ಎಂದರು.
ಬಸವರಾಜ್ ಹನುಮಲಿ ಪುರಂದರ, ಕನಕ ದಾಸರ ವ್ಯಕ್ತಿಗಳು ಜಾತಿಗೆ ಸೀಮಿತ ಮಾಡಬಾರದು, ಮೋಹನ ತರಂಗಿಣಿ, ರಾಮ ಧಾನ್ಯ ಚರಿತ ಬಗ್ಗೆ ಮಾತಾಡಿದರು.
ಕೊಟ್ಟೂರು ಶ್ರೀ ಯೋಗಿರಾಜೇಂದ್ರ ಸ್ವಾಮಿ ಮಾತನಾಡಿ, ಕನ್ನಡ ಅದ್ಭುತ ಭಾಷೆ. ಅದನ್ನು ಉಳಿಸಿ ಬೆಳಸಬೇಕಿದೆ ಎಂದರು.
ಕಸಾಪ ತಾಲೂಕ ಅಧ್ಯಕ್ಷ ವಾಮದೇವಪ್ಪ ಮಾತಾಡಿ, 3ನೇ ವಿಶ್ವ ಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ ನಡೆಯಲು ಹೋರಾಡೋಣ ಎಂದರು.



