ಡಿವಿಜಿಸುದ್ದಿ.ಕಾಂ, ಹರಿಹರ: ತಾಲ್ಲೂಕಿನ ಭಾನುವಳ್ಳಿಯಲ್ಲಿ ಶ್ರೀ ಏಕಲವ್ಯ ಯುವಕ ಸಂಘದಿಂದ ವಾಲ್ಮೀಕಿ ಜಯಂತೋತ್ಸವ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ತೃತೀಯ ವರ್ಷದ ಹೊನಲು-ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಿದೆ.
ಅ.19 ರಂದು ಮಧ್ಯಾಹ್ನ 12 ಗಂಟೆಗೆ ಭಾನುವಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಚಾಲನೆ ನೀಡಲಾಗುವುದು. ಪ್ರಥಮ ಬಹುಮಾನ 10,001 , ದ್ವಿತೀಯ ಬಹುಮಾನ 5,001 ಹಾಗೂ ತೃತೀಯ ಬಹುಮಾನ 3,001 ರೂಪಾಯಿ ಜೊತೆಗೆ ಟ್ರೋಫಿ ನೀಡಲಾಗುವುದು. ಪ್ರವೇಶ ಶುಲ್ಕ 501 ರೂಪಾಯಿ ನಿಗದಿಪಡಿಸಲಾಗಿದೆ.
ಉದ್ಘಾಟನೆಯನ್ನು ಶಾಸಕ ಎಸ್. ರಾಮಪ್ಪ ನೆರವೇರಿಸಲಿದ್ದು, ಮುಖ್ಯ ಆತಿಥಿಗಳಾಗಿ ಭಾನುವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವನಗೌಡ ಪಾಟೀಲ್, ನಿವೃತ್ತ ಶಿಕ್ಷಕ ಟಿ.ಪುಟ್ಟಪ್ಪ, ಮುಂಖಡರಾದ ಮದ್ದಾನಿ ಗೌಡ್ರು, ಎಚ್.ಕೆ. ಕನ್ನಪ್ಪ ಭಾಗಿಯಾಗಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8123326142,7204218355, 9844414878, 8951932393, 8123887278,8722391870 ಸಂಪರ್ಕಿಸಿ.