ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲೆಯ ಕೋವಿಡ್-19 ನಿಯಂತ್ರಣ ಕಾರ್ಯಕ್ರಮದಲ್ಲಿ ಸಂಚಾರಿ ಕ್ಷಿಪ್ರ ಪ್ರತಿಜನಕ ಪರೀಕ್ಷೆ (RAT) ಮಾದರಿ ಸಂಗ್ರಹಿಸಲು ಪ್ರಯೋಗಶಾಲಾ ತಂತ್ರಜ್ಞರನ್ನು ಮೆರಿಟ್ ಆಧಾರದಲ್ಲಿ ಹಾಗೂ ಡಾಟಾ ಎಂಟ್ರಿ ಆಪರೇಟರ್‍ನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 6 (ಆರು) ತಿಂಗಳ ಅವಧಿಯವರಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಸಂಬಂಧಿಸಿದ ಮೂಲ ದಾಖಲಾತಿಗಳು ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಆ.24 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಸಿ.ಜಿ. ಆಸ್ಪತ್ರೆ ಆವರಣ, ದಾವಣಗೆರೆ ಇಲ್ಲಿಗೆ ಹಾಜರಾಗಬೇಕು.
ಪ್ರಯೋಗಶಾಲಾ ತಂತ್ರಜ್ಞರ ಹುದ್ದೆ ಅರ್ಹತೆ: ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ದ್ವಿತೀಯ ಪಿ.ಯು.ಸಿ ವಿಜ್ಞಾನ, ಎಸ್‍ಎಸ್‍ಎಲ್.ಸಿ ತತ್ಸಮಾನ ವಿದ್ಯಾರ್ಹತೆ ನಂತರ ಡಿಎಂಎಲ್‍ಟಿ ಕೋರ್ಸ್ ಹೊಂದಿರಬೇಕು ಹಾಗೂ ಪ್ರಯೋಗಾ ಶಾಲಾ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೇ ವೈದ್ಯಕೀಯ ಮಂಡಳಿಯ ನೋಂದಣಿ ಹೊಂದಿರಬೇಕು. ಪ್ರಯೋಗಶಾಲಾ ತಂತ್ರಜ್ಞರು ಲಭ್ಯವಿಲ್ಲದಿದ್ದಲ್ಲಿ ನಿಗದಿಪಡಿಸಲಾದ ವಿದ್ಯಾರ್ಹತೆಯನ್ನು ಸಡಿಲಿಸಿ ಲಭ್ಯತೆಗನುಸಾರವಾಗಿ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ಪದವೀಧರರನ್ನು ಪರಿಗಣಿಸಲಾಗುವುದು.
ಡಾಟಾ ಎಂಟ್ರಿ ಅಪರೇಟರ್ ಹುದ್ದೆ ಅರ್ಹತೆ: ಪಿಯುಸಿ ಅಥವಾ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದ ಡಾಟಾ ಎಂಟ್ರಿ ಆಪರೇಟರ್ ಪದವಿ ಮತ್ತು 1 ವರ್ಷದ ಕಂಪ್ಯೂಟರ್ ತರಬೇತಿಯನ್ನು ಹೊಂದಿರಬೇಕು. ನೇಮಕಾತಿ ಕುರಿತು ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08192-297171, 08192-223761 ಸಂಪರ್ಕಿಸಬೇಕೆಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಜಿ.ಡಿ ರಾಘವನ್ ತಿಳಿಸಿದ್ದಾರೆ.