ಕೊಲಂಬಿಯಾ: ಜಾರ್ಜ್ ಫ್ಲಾಯ್ಡ್ ಸಾವಿನ ನಂತರ ವರ್ಣಭೇದ ನೀತಿಯ ವಿರುದ್ಧ ಪ್ರತಿಟನಾಕಾರರ ಆಕ್ರೋಶಕ್ಕೆ ವಸಾಹತು ಕಾಲದ ನಾಯಕರ ಪ್ರತಿಮೆ ನಾಶ ಮಾಡಲಾಗುತ್ತಿದೆ.
ಮೂರು ನಗರಗಳಲ್ಲಿ ವಸಾಹತುವಿನ ಅನ್ವೇಷಕ ಕ್ರಿಸ್ಟೋಫರ್ ಕೊಲಂಬಸ್ ಪ್ರತಿಮೆಗಳನ್ನು ಹಾನಿಗೊಳಿಸಲಾಗಿತ್ತು. ಇದೀಗ ಸುರಕ್ಷತಾ ದೃಷ್ಟಿಯಿಂದ ಪ್ರತಿಮೆಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಒಂದು ವಾರದಲ್ಲಿ ಅನೇಕ ಬಾರಿ ಪ್ರತಿಮೆ ಮೇಲೆ ದಾಳಿ ನಡೆದಿದೆ.
ಉತ್ತರ ಅಮೆರಿಕಕ್ಕೆ 1492ರಲ್ಲಿ ಕೊಲಂಬಸ್ ಬಂದಿದ್ದ. ಅಮೆರಿಕದ ವಿವಿಧ ನಗರಗಳಲ್ಲಿ ಆತನ ಪ್ರತಿಮೆಗಳನ್ನು ಈಗಾಗಲೇ ಪ್ರತಿಭಟನಾಕಾರರು ನಾಶಗೊಳಿಸಿದ್ದಾರೆ.



