ನ್ಯೂಯಾರ್ಕ್: ಭಾರತೀಯ–ಅಮೆರಿಕನ್ ಮಣ್ಣು ವಿಜ್ಞಾನಿ ರತನ್ ಲಾಲ್ ಅವರಿಗೆ ಅಮೆರಿಕದ ಪ್ರತಿಷ್ಠಿತ 2020ರ ವಿಶ್ವ ಆಹಾರ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ 1.90 ಕೋಟಿ ನಗದು ಮೊತ್ತ ಒಳಗೊಂಡಿದೆ.
ಮಣಿನ ಫಲವತ್ತತೆ ಹೆಚ್ಚಳ, ಆಹಾರ ಉತ್ಪಾದನೆ ಹೆಚ್ಚಳ ಕುರಿತು ನಡೆಸಿದ ಸಂಶೋಧನೆಗೆ ರತನ್ ಲಾಲ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಹಾರ ಉತ್ಪಾದನೆಯ ಹೆಚ್ಚಳ ಮತ್ತು ಪೋಷಕಾಂಶಗಳ ಮರು ಬಳಕೆ ಕುರಿತು ಅವರ ಸಂಶೋಧನೆ ಫಲವಾಗಿ ಲಕ್ಷಾಂತರ ಸಣ್ಣ ರೈತರಿಗೆ ಸಹಾಯ ಮಾಡಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.