ಬೀಚಿಂಗ್: ಕೇಂದ್ರ ಸರ್ಕಾರ ಚೀನಾ ಮೂಲದ 59 ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿರುವುದರ ಬಗ್ಗೆ ಚೀನಾ ಸರ್ಕಾರ ಅಸಮಾಧಾನ ಹೊರಹಾಕಿದೆ.
ಭಾರತ ಸರ್ಕಾರದ ನಿರ್ಧಾರದ ವಸ್ತುಸ್ಥಿತಿಯನ್ನು ವಿಮರ್ಶಿಸುತ್ತಿದ್ದೇವೆ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಝ್ವಾ ಲಿಜಿಯಾನ ಹೇಳಿದ್ದಾರೆ. ವಿದೇಶಗಳಲ್ಲಿ ವ್ಯಾಪಾರ ಮಾಡುತ್ತಿರುವ ಚೀನಾದ ಕಂಪನಿಗಳು ಅಂತರರಾಷ್ಟ್ರೀಯ ನಿಯಮಗಳು ಮತ್ತು ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರಬೇಕು. ಚೀನಾ ಸೇರಿದಂತೆ ಎಲ್ಲ ಅಂತರರಾಷ್ಟ್ರೀಯ ಹೂಡಿಕೆದಾರರ ನ್ಯಾಯಬದ್ಧ ಹಕ್ಕು ಕಾಪಾಡುವುದು ಭಾರತ ಸರ್ಕಾರದ ಕರ್ತವ್ಯ ತಿಳಿಸಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಈ ಬಗ್ಗೆ ವರದಿ ಮಾಡಿದ್ದು, ಗಡಿಯಲ್ಲಿ ಎರಡು ದೇಶಗಳ ನಡುವೆ ಸಂಘರ್ಷದಿಂದ ಭಾರತ ಸರ್ಕಾರ ಸೋಮವಾರ ಟಿಕ್‌ಟಾಕ್ ಸೇರಿದಂತೆ 59 ಚೀನಾ ಮೂಲಕ ಆ್ಯಪ್‌ಗಳನ್ನು ನಿಷೇಧ ಹೇರಿತ್ತು.
We want to stress that Chinese Govt always asks Chinese businesses to abide by international & local laws-regulations. Indian Govt has a responsibility to uphold the legal rights of international investors including Chinese ones: Zhao Lijian, Chinese Foreign Ministry spokesperson https://t.co/2Q668cSstA pic.twitter.com/MfcKm7ZiLV
— ANI (@ANI) June 30, 2020



