ಕ್ಯಾಲಿಫೋರ್ನಿಯಾ: ಜಗತ್ತಿನಾದ್ಯಂತ ಜಿಮೇಲ್ ಸೇವೆ ಡೌನ್ ಆಗಿದ್ದು, ಇದರಿಂದ ಜಿಮೇಲ್ ಬಳಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಭಾರತ, ಅಮೆರಿಕ, ಆಸ್ಟ್ರೇಲಿಯ, ಜಪಾನ್ ಸೇರಿದಂತೆ ಜಗತ್ತಿನ ಹಲವೆಡೆ ಬಳಕೆದಾರರಿಗೆ ಸಮಸ್ಯೆಯಾಗುತ್ತಿದೆ. ಇಂದು ಬೆಳಗ್ಗೆಯಿಂದಲೇ ಸೇವೆ ಡೌನ್ ಆಗಿದೆ. ಯಾವುದೇ ಇಮೇಲ್ ಮತ್ತು ಅಟ್ಯಾಚ್ ಫೈಲ್‌ಗಳನ್ನು ಸೆಂಡ್ ಮಾಡಲು ಆಗುತ್ತಿಲ್ಲ.
ಗೂಗಲ್ ಡ್ರೈವ್‌ನಲ್ಲೂ ಫೈಲ್‌ಗಳ ಅಪ್ಲೋಡ್, ಡೌನ್‌ಲೋಡ್ ಮತ್ತು ಶೇರ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗೂಗಲ್ ಪ್ರತಿಕ್ರಿಯಿಸಿ, ಸಮಸ್ಯೆ ಅರಿವಿಗೆ ಬಂದಿದೆ. ಶೀಘ್ರವೇ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದೆ.
ಸಮಸ್ಯೆ ಬಗ್ಗೆ ತಂತ್ರಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಮಧ್ಯಾಹ್ನ 1.30ಕ್ಕೆ ನೀಡಲಾಗುವುದು ಎಂದು ಗೂಗಲ್ ಕಂಪನಿ ಹೇಳಿದೆ.



