ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರಿದಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.26 ಕೋಟಿಗೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 5.62ಲಕ್ಷಕ್ಕೆ ತಲುಪಿದ್ದು, 73 ಲಕ್ಷ ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಅಮೆರಿಕದಲ್ಲಿ 32, 91,786 ಜನರಿಗೆ ಪತ್ತೆಯಾಗಿದ್ದ, ಬ್ರೆಜಿಲ್‌ನಲ್ಲಿ 18 ಲಕ್ಷ ಮಂದಿ, ರಷ್ಯಾದಲ್ಲಿ 7,13936 ಮಂದಿಗೆ ಸೋಂಕು ತಗುಲಿದೆ. ಅಮೆರಿಕಾದಲ್ಲಿ 1.36ಲಕ್ಷ ಮಂದಿ ಸಾವನ್ನಪ್ಪಿದ್ದರೆ, ಬ್ರೆಜಿಲ್‌ನಲ್ಲಿ 70,524 ಮಂದಿ ಸಾವನ್ನಪ್ಪಿದ್ದಾರೆ.ಭಾರತದಲ್ಲಿ ಒಟ್ಟು 8.22 ಲಕ್ಷ ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, 22,144 ಮಂದಿ ಸಾವನ್ನಪ್ಪಿದ್ದಾರೆ. 51, 206 ಮಂದಿ ಗುಣಮುಖರಾಗಿದ್ದಾರೆ.
ಕಳೆದ ಒಂದು ದಿನದಲ್ಲಿ ಪಾಕಿಸ್ತಾನದಲ್ಲಿ 2,752 ಹೊಸ ಪ್ರಕರಣಗಳು ವರದಿಯಾಗಿದ್ದು, 65 ಮಂದಿ ಸಾವನ್ನಪ್ಪಿದ್ದಾರೆ. ಮೆಕ್ಸಿಕೋದಲ್ಲಿ 6,891 ಹೊಸಪ್ರಕರಣಗಳು ವರದಿಯಾಗಿದ್ದು, 665 ಮಂದಿ ಸಾವನ್ನಪ್ಪಿದ್ದಾರೆ. ಕಜಕಿಸ್ಥಾನದಲ್ಲಿ 1,708 ಹೊಸ ಪ್ರಕರಣಗಳು ವರದಿಯಾಗಿವೆ. ಬೊಲಿವಿಯಾದಲ್ಲಿ 1,452 ಹೊಸ ಪ್ರಕರಣಗಳು ವರದಿಯಾಗಿದ್ದು, 64 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಉಗಮ ಸ್ಥಾನ ಚೀನಾದಲ್ಲಿ 2 ಹೊಸ ಪ್ರಕರಣಗಳು ವರದಿಯಾಗಿವೆ.
ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ 2.46ಲಕ್ಷ ಮಂದಿಗೆ ತಗುಲಿದೆ. ಇದುವರೆಗೆ 5123 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿಗೆ ಇದುವರೆಗೆ ಸ್ಪೇನ್‌ನಲ್ಲಿ 28,403, ಇಟಲಿಯಲ್ಲಿ 34,938, ಫ್ರಾನ್ಸ್‌ನಲ್ಲಿ 30,004 ಹಾಗೂ ಜರ್ಮನಿಯಲ್ಲಿ 9,130 ಮಂದಿ ಅಸುನೀಗಿದ್ದಾರೆ.



