ಡಿವಿಜಿ ಸುದ್ದಿ, ಹೊನ್ನಾಳಿ: ದೀಪದ ಹಬ್ಬ ದೀಪಾವಳಿ ಇವತ್ತು ರೈತನಿಗೆ ಕರಾಳ ದಿನವಾಗಿತ್ತು.. ಹೌದು, ತನ್ನ ಕೃಷಿ ಕಾರ್ಯ ಮುಗಿಸಿಕೊಂಡು ಎತ್ತು ಮೈತೊಳೆಯಲು ಹೋದ ರೈತ ತುಂಗಾಭದ್ರ ನದಿಯಲ್ಲಿ ನೀರಿನ ಸೆಳೆತಕ್ಕೆ ಸಿಕ್ಕು ನೀರು ಪಾಲಾದ ಘಟನೆ ಹೊನ್ನಾಳಿ ತಾಲ್ಲೂಕಿನ ಬೇಲಿಮಾಲ್ಲೂರು ಗ್ರಾಮದಲ್ಲಿ ನಡೆದಿದೆ.

ಎರಡು ಎತ್ತುಗಳ ಸಾವನ್ನಪ್ಪಿದ್ದು, ನೀರು ಪಾಲಾದ ರೈತ ರಮೇಶಗಾಗಿ (28) ಹುಡುಕಾಟ ನಡೆಯುತ್ತಿದೆ. ಚಕ್ಕಡಿ, ಎತ್ತುಗಳ ಸಹಿತ ನೀರಿಗಳಿದಿದ್ದ ರೈತ ರಮೇಶ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು. 2 ಎತ್ತುಗಳಿಗೆ 60 ಸಾವಿರ ರೂಪಾಯಿಗಳನ್ನು ಪಶು ಇಲಾಖೆ ವತಿಯಿಂದ ಮತ್ತು ವೈಯಕ್ತಿಕವಾಗಿ 50 ಸಾವಿರ ರೂಪಾಯಿ ಗಳನ್ನು ಕೊಡುವುದಾಗಿ ರೇಣುಕಾಚಾರ್ಯ ಸ್ಥಳದಲ್ಲೇ ಘೋಷಿಸಿದರು. ಮೃತ ದೇಹ ಸಿಕ್ಕ ನಂತರ ಸರ್ಕಾರ ದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಹೊನ್ನಾಳಿ ಪೊಲೀಸ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳೀಯರು ಸಹ ಶವ ಶೋಧ ಕಾರ್ಯಾಚರಣೆ ನಡೆಸಿದರು.ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



