ಡಿವಿಜಿ ಸುದ್ದಿ, ಹೊನ್ನಾಳಿ: ತಾಲ್ಲೂಕಿನ ಬೇಲಿಮಲ್ಲೂರಿನಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆ ಎತ್ತು ಮೈತೊಳೆಯಲು ಹೋಗಿ ನೀರು ಪಾಲಾಗಿದ್ದ ರೈತನ ಶವ ಪತ್ತೆಯಾಗಿದೆ.
ಸೋಮವಾರ ತುಂಗಾಭದ್ರಾ ನದಿಯಲ್ಲಿ ಎತ್ತು ಮೈತೊಳೆಯಲು ಹೋಗಿ ನೀರಿನ ಸೆಳೆತಕ್ಕೆ ಸಿಕ್ಕು ರೈತ ರಮೇಶ್ (28) ಕೊಚ್ಚಿ ಹೋಗಿದ್ದ. ನೀರಿನ ಸೆಳೆತಕ್ಕೆ ಎರಡು ಎತ್ತುಗಳು ಸಹಾ ಸಾವನ್ನಪ್ಪಿದ್ದವು. ನೀರಿನಲ್ಲಿ ಕೊಚ್ಚಿ ಹೋಗಿದ್ದ ರಮೇಶನಿಗಾಗಿ ಸ್ಥಳೀಯರು ಹುಡುಕಾಟ ನಡೆಸಿದ್ದರು.
ಇಂದು ಬೆಳಗ್ಗೆ ರೈತನ ಶವ ಪತ್ತೆಯತಾಗಿದ್ದು, ರೈತನ ಕುಟುಂಬ ಸೇರಿದಂತೆ ಇಡೀ ಊರಿನಲ್ಲಿ ದುಖಃದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.