ಡಿವಿಜಿಸುದ್ದಿ.ಕಾಂ, ಹೊನ್ನಾಳಿ: ಮಹಾತ್ಮಗಾಂಧೀಜಿಯವರ 150 ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ 111 ನೇ ಜಯಂತಿ ಅಂಗವಾಗಿ ಹೊನ್ನಾಳಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಸದ್ಭಾವನ ಯಾತ್ರೆ ನಡೆಸಲಾಯಿತು.
ಐಬಿ ಯಲ್ಲಿರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಟಿಬಿ ಸರ್ಕಲ್ ಮೂಲಕ ಕನಕ ರಂಗಮಂದಿರದ ವರೆಗೆ ಯಾತ್ರೆ ನಡೆಸಲಾಯಿತು.
ಮಾಜಿ ಶಾಸಕ ಡಿಜಿ ಶಾಂತನಗೌಡ್ರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಬಿ. ಮಂಜಪ್ಪ, ಸಣ್ಣಕ್ಕಿ ಬಸವನಗೌಡ್ರು, ಗದಿಗೆಶಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ವಿಶ್ವನಾಥ್ , ಉಮಾಪತಿಯವರು ಆರ್, ನಾಗಪ್ಪ, ಶಿವಯೋಗಪ್ಪ , ಸುಲೇಮಾನ್ ಖಾನ್, ತಾಲ್ಲೂಕು ಪಂಚಾಯಿತಿ ಸದಸ್ಯ ಅಬಿದಾಲ್ಲಿ ಖಾನ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಶೇಖರಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮಧುಗೌಡ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾವತಿ, ಎನ್ಎಸ್ ಯು ಅಧ್ಯಕ್ಷ ಮನೋಜ್ , ಯುವ ಕಾಂಗ್ರೆಸ್ಸಿನ ತಾಲ್ಲೂಕು ಕಾರ್ಯದರ್ಶಿ ರೋಷನ್, ಬಾಹುಬಲಿ ಪ್ರವೀಣ್ , ಮಂಜು ಸೇರಿದಂತೆ ಮತ್ತಿತರರು ಭಾಗಿಯಾಗಿದ್ರು.