ಡಿವಿಜಿಸುದ್ದಿ.ಕಾಂ, ಹೊನ್ನಾಳಿ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ.
ಕಳೆದ ಹದಿನೈದು ದಿನಗಳಿಂದ ಚೀಲಾಪುರ ಗ್ರಾಮ ಸುತ್ತಮುತ್ತ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಬಂಧಿಸಿದೆ. ಬೋನ್ ಗೆ ಚಿರತೆಯಿಂದ ಗ್ರಾಮಸ್ಥರು ನೆಮ್ಮದಿ ನೆಟ್ಟುಸಿರು ಬಿಡುವಂತಾಗಿದೆ.



