ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಜು.11 ಮತ್ತು 12ರಂದು ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುತ್ತಲಿದೆ. ಜು. 13 ರಿಂದ ಉತ್ತರ ಒಳನಾಡಿನಲ್ಲಿಯೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಮುದ್ರದಲ್ಲಿ 3.3 ಮೀಟರ್ ಗಳಷ್ಟು ಎತ್ತರದ ಅಲೆಗಳೂ ಏಳುತ್ತಿವೆ. ಹೀಗಾಗಿ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲೂ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದ್ದು, ಉತ್ತರ ಒಳನಾಡಿನಲ್ಲಿ ಇದೇ 13ರಿಂದ ಭಾರೀ ಮಳೆ ಸಾಧ್ಯತೆ ಇದೆ.
ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಗರಿಷ್ಠ 17 ಸೆಂ.ಮೀ ಮಳೆಯಾಗಿದೆ. ಕದ್ರಾ 11, ಕಾರವಾರ 6, ಕುಂದಾಪುರ 5, ಹೊನ್ನಾವರ, ಉಡುಪಿ, ಕೊಪ್ಪ, ಕೊರಟಗೆರೆ, ಶಿಕಾರಿಪುರ 4, ಮಂಗಳೂರು, ಮೂಡುಬಿದಿರೆ, ಚಿಕ್ಕೋಡಿ, ಬೈಲಹೊಂಗಲ, ನಿಪ್ಪಾಣಿ, ಬೆಳಗಾವಿ, ಗದಗ, ಬಂಗಾರಪೇಟೆ, ಕುಣಿಗಲ್, ಕನಕಪುರ, ಚಳ್ಳಕೆರೆ, ಆನೇಕಲ್, ಚನ್ನಪಟ್ಟಣ, ಕೋಲಾರ ತಲಾ 3, ಧಾರವಾಡ, ಹಾವೇರಿ, ಹುಬ್ಬಳ್ಳಿ, ಗೌರಿಬಿದನೂರು, ಚಿಂತಾಮಣಿ, ದೊಡ್ಡಬಳ್ಳಾಪುರ, ಸೊರಬ, ಭಾಗಮಂಡಲ, ಚಿತ್ರದುರ್ಗ, ಹೊಸದುರ್ಗ, ತೀರ್ಥಹಳ್ಳಿ, ಮಾಲೂರು, ತರೀಕೆರೆ, ಮೂಡಿಗೆರೆಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.



