ಡಿವಿಜಿ ಸುದ್ದಿ.ಕಾಂ, ಹರಿಹರ: ನ್ಯಾ.ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಮೀಸಲಾತಿ ಹೆಚ್ಚಿಸಲು ಸಮಿತಿ ರಚಿಸಲಾಗಿದ್ದು, ವರದಿ ಅನ್ವಯ ಮೀಸಲಾತಿ ಹೆಚ್ಚಿಸುತ್ತೆವೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ತೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಅದಿಕವಿ ಮಹರ್ಷಿ ವಾಲ್ಮೀಕಿ ಅವರು ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವುದರ ಮೂಲಕ
ದೇಶಕ್ಕೆ ಭಾರತದ ಸಂಸ್ಕೃತಿಯನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದರು.

ಮಹಾತ್ಮರಿಗೆ ಜಾತಿ ಇಲ್ಲ. ಜಾತಿಯಿಂದ ಯಾವ ಮಹಾತ್ಮರನ್ನು ನೋಡಬಾರದು. ಮರಳಸಿದ್ಧರು, ಬಸವಣ್ಣನವರು, ಕನಕಸದಾಸರ ಸಂದೇಶ, ಕಿರ್ತನೆಗಳು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರ ಆದರ್ಶಗಳು, ತತ್ವಗಳು ಮಾನವನ ಬದುಕಿಗೆ ಬೆಳಕಾಗಿದೆ ಎಂದರು.
ವಾಲ್ಮೀಕಿ ಜಯಂತಿ ಆಚರಿಸುವುದರ ಜೊತೆಗೆ ಸರ್ಕಾರಿ ರಜೆ ಘೋಷಿಸಿದ ಕಿರ್ತಿ ಬಿಎಸ್ ವೈಗೆ ಸಲ್ಲುತ್ತದೆ. ನಮ್ಮ ಹಕ್ಕು ಪಡೆಯಲು ರಾಜನಹಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮೂಲಕ ಮೀಸಲಾತಿ ಹೆಚ್ಚಿಸಲು ಎಲ್ಲಾ ಸಮಾಜದವರು ಅಭೂತಪೂರ್ವ ಬೆಂಬಲ ನೀಡಿದರು ಎಂದು ತಿಳಿಸಿದರು.
ಜಯಂತಿ ನೆಪದಲ್ಲಿ ಮೆರವಣಿಗೆ ಮಾಡುವುದರ ಮೂಲಕ ಕುಡಿದು ಕುಣಿಯುವುದು ಬಹುತೇಕ ಕಡೆ ಕೇಳಿ ಬರುತ್ತಿರುವುದು ಬೇಸರದ ಸಂಗತಿ. ಇದರಿಂದ ಇಂದಿನ ಯುವ ಪೀಳಿಗೆ ದುಚ್ಚಟಗಳಿಗೆ ದಾಸರಾಗಿಮಾಡಿಕೊಳ್ಳುತ್ತಿದ್ದಾರೆ, ಯುವಕರು ದುಶ್ಚಟಗಳನ್ನು ಬಿಟ್ಟು ಒಳ್ಳೆಯ ಜೀವನ ನಡೆಸಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್, ಹೆಚ್.ಎಸ್.ಶಿವಶಂಕರ್, ಜಿ.ಪಂ. ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ನಗರಸಭಾ ಸದಸ್ಯ ದಿನೇಶ್ ಬಾಬು, ಬಿಜೆಪಿ ಮುಖಂಡ ರಾಜನಹಳ್ಳಿ ಶಿವಕುಮಾರ್, ವಾಲ್ಮೀಕಿ ಸಮಾಜದ ನಗರ ಘಟಕ ಅಧ್ಯಕ್ಷ ಕೆ.ಬಿ. ಮಂಜುನಾಥ್, ಆನಂದಪ್ಪ, ಜಿ.ಮಂಜುನಾಥ್ ಪಟೇಲ್, ಮಾರುತಿ ಬೇಡರ್, ದಾವಣಗೆರೆ ಸಿಪಿಐ ಮಂಜುನಾಥ್ ನಾಲವಾಗಲು, ಡಿ.ವೈ. ಇಂದಿರಾ ಮಂಜುನಾಥ್, ಯಕ್ಕನಹಳ್ಳಿ ಬಸವರಾಜಪ್ಪ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.



