ಡಿವಿಜಿಸುದ್ದಿ.ಕಾಂ, ಹರಿಹರ: ನಗರದ ವಿವಿಧ ಮಾಲ್, ಅಂಗಡಿಗಳ ಮೇಲೆ ಗುರುವಾರ ನಗರಸಭೆ ಅಧಿಕಾರಿಗಳ ದಾಳಿ ನಡಸಿ 15 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡರು. ಅಂಗಡಿಗಳ ಮಾಲಿಕರಿಗೆ 15 ಸಾವಿರ ದಂಡ ವಿಧಿಸಿದ್ದಾರೆ.
ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದನ್ವಯ ನಗರದ ಮುಖ್ಯರಸ್ತೆ, ದೊಡ್ಡಿ ಬೀದಿಯ ತರಕಾರಿ ಮಾರುಕಟ್ಟೆ, ಬಟ್ಟೆ ಅಂಗಡಿಗಳು ಸೇರಿದಂತೆ ವಿವಿಧ ಅಂಗಡಿಗಳ ಮೇಲೆ ಧೀಡಿರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ 15 ಸಾವಿರ ಪ್ಲಾಸ್ಟಿಕ್ ವಶಕ್ಕೆ ಪಡೆದು, ಪ್ಲಾಸ್ಟಿಕ್ ಕವರ್ ಇರುವ ಅಂಗಡಿ ಮಾಲಿಕರಿಗೆ 15 ಸಾವಿರ ದಂಡ ವಿಧಿಸಿ, ಮಾಲೀಕರಿಗೆ ಎಚ್ಚರಿಕೆ ನೋಟಿಸ್ ನೀಡಿದರು.
ನಂತರ ಮಾತನಾಡಿದ ಪೌರಾಯುಕ್ತರು, ಅ.2 ರಿಂದ ದೇಶದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದರೂ, ನಗರದಲ್ಲಿ ವ್ಯಾಪಕವಾಗಿ ಪ್ಲಾಸ್ಟಿಕ್ ಬಳಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದೇವೆ. ಇದಲ್ಲದೆ ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಕಂದಾಯ ನಿರೀಕ್ಷಕ ಮಂಜುನಾಥ್, ಆರ್.ಐ. ಕಿರಣ್, ಆರೋಗ್ಯ ನಿರೀಕ್ಷಕ ಕೋಡಿ ಭೀಮರಾಯ್, ಸಿಬ್ಬಂದಿ ಪರಶುರಾಮ್, ಗುತ್ಯಪ್ಪ ಹಾಗೂ ಇತರರು ಉಪಸ್ಥಿತರಿದರು.