ಗಂಗನರಸಿಯಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಉದ್ಘಾಟನೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ, ಹರಿಹರ: ತಾಲ್ಲೂಕಿನ ಗಂಗನರಸಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನೂತನ ಬೀರಲಿಂಗೇಶ್ವರ ಟ್ರಸ್ಟ್ ಅನ್ನು ಶಾಸಕ ಎಸ್. ರಾಮಪ್ಪ ಚಾಲನೆ ನೀಡಿದರು.

ಟ್ರಸ್ಟ್ ಗೆ ಚಾಲನೆ ನೀಡಿದ ನಂತರ ಮಾತನಾಡಿ, ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಸದ ತಮ್ಮನು ತೊಡಗಿಸಿ ಕೊಂಡಾಗ ಮಾತ್ರ ಟ್ರಸ್ಟ್ ಗಳಿಗೆ ಅರ್ಥ ಬರುತ್ತದೆ. ಎಲ್ಲಾ ಸಮಾಜದವರನ್ನು ಒಗ್ಗೂಡಿಸಿ ಕೊಂಡು ಮುನ್ನಡೆಯುವ ಕೆಲಸವಾಗಬೇಕು ಎಂದರು.

ಗ್ರಾಮದ ಗೋಣಿ ಬಸವೇಶ್ವರ ಮಠದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.  ಅದೇ ರೀತಿ  ಈ ನೂತನ ಕಮೀಟಿಯಲ್ಲಿ ನಡೆಯುವಂತಾಗಬೇಕು.  ಒಬ್ಬರಿಗೊಬ್ಬರು   ಸಹಕಾರದ ಮನೋಭವದ ಬೆಳಸಿಕೊಳ್ಳಬೇಕು ಎಂದು ಕರೆ ನೂತನ ಕಮಿಟಿಯ 23 ಸದಸ್ಯರಿಗೆ ಕಿವಿ ಮಾತನಾಡಿದರು.

ಗ್ರಾಮದ ಮುಖಂಡ ಮಠದ ನಾಗೇಂದ್ರಪ್ಪ ಮಾತನಾಡಿ, ಗ್ರಾಮದಲ್ಲಿನ  ಟ್ರಸ್ಟಿನ ಸದಸ್ಯರು ದೇವಸ್ಥಾನದ ಶ್ರಯೋಭಿವೃದ್ಧಿಗೆ ಶ್ರಮವಹಿಸಿಬೇಕು. ಮುಂದಿನ ದಿನಗಳಲ್ಲಿ ಗುತ್ತೂರು ಗ್ರಾಮ ಪಂಚಾಯತಿಯು  ಕಾರ್ಯಾಲಯವು ನಗರಸಭೆಗೆ  ಸೇರುತ್ತದೆ. ಹೀಗಾಗಿ  ಗಂಗನರಸಿ ಗ್ರಾಮದಲ್ಲಿ ಜನಸಂಖ್ಯೆ ಆಧರಿತವಾಗಿ ಗ್ರಾಮ ಪಂಚಾಯತಿ ಹಾಗೂ ಸಾರ್ವಜನಿಕ ತೆರೆಯುವಂತೆ   ಶಾಸಕರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಹಾಲಮ್ಮ, ,ಶೀಲಾ ಗುತ್ಯಪ್ಪ,  ಗೋಣೆಪ್ಪ  ಕಟ್ಟವರ್, ಟ್ರಸ್ಟ್ ನ ಅಧ್ಯಕ್ಷ ಬಣಕಾರ ಸಿದ್ದಪ್ಪ, ತಾಲ್ಲೂಕು ಕುರುಬರ ಸಮಾಜದ ಅಧ್ಯಕ್ಷ. ಕೆ ಜಡಯಪ್ಪ , ಮಾಜಿ ತಾ.ಪಂ  ಮಾಜಿ ಸದಸ್ಯ ಎಚ್. ಬಸವರಾಜ್,  ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಬಸಪ್ಪ ಹಾಗು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *