ಡಿವಿಜಿ ಸುದ್ದಿ, ಹರಪನಹಳ್ಳಿ: ನಿನ್ನೆ ಸುರಿದ ಭಾರೀ ಮೆಳೆಗೆ ತಾಲೂಕಿನ ಬೆಂಡಿಗೇರಿ ಸಣ್ಣ ತಾಂಡದ ಕೆರೆ ಕೋಡಿ ಹೊಡೆದಿದೆ. ಕಳೆದ ನಾಲ್ಕು ವರ್ಷದ ನಂತರ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಈ ಭಾಗದ ರೈತರು ಮತ್ತು ಜನರಲ್ಲಿ ವರ್ಷವನ್ನು ಇಮ್ಮುಡಿಗೊಳಿಸಿತ್ತು. ಆದರೆ, ಕೋಡಿ ಹೊಡೆದಿದ್ದರಿಂದ ಅಪಾರ ಪ್ರಮಾಣ ನೀರು ಪೋಲಾಗುತ್ತಿದೆ.
ನಿನ್ನೆ ಮಧ್ಯಾಹ್ನದಿಂದಲೂ ಜಿನುಗುತ್ತಿದ್ದ ಮಳೆ, ರಾತ್ರಿ ವೇಳೆ ಭಾರೀ ಮಳೆಯಾಗಿದೆ. ನಿರಂತರವಾಗಿ ಮಳೆ ಸುರಿದ ಪರಿಣಾಮ ಕೆರೆ ಭರ್ತಿಯಾಗಿದೆ. ಮಳೆಯಿಂದ ಬೆಂಡಿಗೇರಿ ಸಣ್ಣ ತಾಂಡದ ರೂಪ್ಲನಾಯ್ಕ ಎಂಬುವರ ಮನೆ ಬಿದ್ದಿದೆ. ಅದೃಷ್ಟವಾಶತ್ ಯಾರಿಗೂ ತೊಂದರೆಯಾಗಿಲ್ಲ. ಕೂಡಲೇ ಪರಿಹಾರ ವಿತರಿಸಬೇಕೆಂದು ಕುಟುಂಬದವರು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.