ಡಿವಿಜಿ ಸುದ್ದಿ, ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಐತಿಹಾಸಿಕ ಉಚ್ಚoಗಿದುರ್ಗದ ಉತ್ಸವಾಂಭ ದೇವಾಲಯದಲ್ಲಿ ನಾಳೆ ನಡೆಯಬೇಕಿದ್ದ ಅನಂತನ ಹುಣ್ಣಿಮೆ ರದ್ದು ಮಾಡಲಾಗಿದೆ. ಕೊರೊನಾ ಬಿಕ್ಕಟ್ಟು ಹಿನ್ನೆಲೆ ಭಕ್ತಾಧಿಗಳು ಬರುವ ಸಂಖ್ಯೆ ತಡೆಯುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಹೆಚ್ಚು ಜನ ಸೇರುವ ಜಾತ್ರೆಗಳನ್ನ ನಿಷೇಧ ಮಾಡಲಾಗಿದೆ. ಹೀಗಾ ನಾಳೆ ಹುಣ್ಣಿಮೆ ದಿನ ಸಾವಿರಾರು ಭಕ್ತರು ಆಗಮಿಸುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಡಳಿತ ಹುಣ್ಣಿಮೆ ರದ್ದು ಮಾಡಿ ಆದೇಶ ಮಾಡಿದೆ. ಹುಣ್ಣಿಮೆ ಹೊರತೂ ಪಡಿಸಿ ಉಳಿದ ದಿನಗಳಲ್ಲಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಧಾರ್ಮಿಕ ಇಲಾಖೆ ಸಿಬ್ಬಂದಿ ರಮೇಶ್ ಹೇಳಿದ್ದಾರೆ.



