ಡಿವಿಜಿ ಸುದ್ದಿ, ಹರಪನಹಳ್ಳಿ : ತಾಲ್ಲೂಕಿನ ಉಚ್ಛಂಗಿದುರ್ಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆಯಿತು.
ಈ ಚುನಾವಣೆಯಲ್ಲಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಡಿ.ನಾಗನಗೌಡ ,ಪಿ.ಮಂಜುನಾಥ್ ನಾಮಪತ್ರ ಸಲ್ಲಿಸಿದರು. ಒಟ್ಟು 13 ನಿರ್ದೇಶಕರೂ 7 ಮತಗಳು ಪಿ.ಮಂಜುನಾಥ್ ಗೆ ಲಭಿಸಿದ್ದರಿಂದ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಪಿ.ನೀಲಾನಾಯ್ಕ್ ಮತ್ತು ಮತ್ತಿಹಳ್ಳಿ ಕರಡೆಪ್ಪ ಇಬ್ಬರು ನಾಮಪತ್ರ ಸಲ್ಲಿಸಿದ್ದರು.ಪಿ.ನೀಲಾನಾಯ್ಕ್ 7 ಮತಗಳು ಲಭಿಸಿದ್ದರಿಂದ ಉಪಾಧ್ಯಕ್ಷರಾಗಿ ಆಯ್ಕೆಯಾದರೆಂದು ಚುನಾವಣಾ ಅಧಿಕಾರಿ ಕೆ.ಚೌಡಪ್ಪ ಪ್ರಾಂಶುಪಾಲರು ಘೋಷಣೆ ಮಾಡಿದರು.
ಬಿ.ಜೆ.ಪಿ.ಬೆಂಬಲಿತ ಅಭ್ಯರ್ಥಿಗಳಾದ ಅಧ್ಯಕ್ಷರಾಗಿ ಪಿ.ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಪಿ.ನೀಲಾನಾಯ್ಕ್ ರವರಿಗೆ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ ನವರು ಅಭಿನಂದನೆ ಸಲ್ಲಿಸಿದರು. ತಳ ಮಟ್ಟದಿಂದ ಬಿಜೆಪಿ ಬಲವಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಉಚ್ಛಂಗಿದುರ್ಗಕ್ಕೆ ಬರಲಿದ್ದಾರೆ. ಅನೇಕ ಅಭಿವೃದ್ಧಿ ಕಾರ್ಯಗಳಿಗೆ, ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿರ್ದೇಶಕರುಗಳಾದ ವಿಜಯ್ ಕುಮಾರ್, ನಂದಿನಿ, ಬಸವರಾಜ್, ರಿಯಾಜ್ ಮುಖಂಡರುಗಳಾದ ,ತಾಲೂಕು ಪಂಚಾಯತ್ ಸದಸ್ಯರಾದ ಕೆಂಚನಗೌಡ್ರು, ರವಿಗೌಡ್ರು, ಎಸ್.ಹನುಮಂತಪ್ಪ, ಚಟ್ನಿಹಳ್ಳಿ ರಾಜಪ್ಪ ಭರಮಣ್ಣ,ಪಣಿಯಾಪುರದ ಲಿಂಗರಾಜ್, ಈರಣ್ಣ,ಪರುಶುರಾಮ್, ಸಿದ್ದನಗೌಡ್ರು, ಮೋಹನ್ ನಾಯ್ಕ್, ಸುರೇಶ್, ಹನುಮಂತ ನಾಯ್ಕ್, ಹತಾಉಲ್ಲಾ, ಚಂದ್ರನಾಯ್ಕ್, ಮಾದಿಹಳ್ಳಿ ಬಸವರಾಜ್ ಹುಚ್ಚಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.