ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಬ್ಲಾಕ್ ನ ಗ್ರಾಮ ಪಂಚಾಯತಿ, ಪೊಲೀಸ್ ಇಲಾಖೆ, ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟರೈಸ್ ಹಾಗೂ ಬಡವರಿಗೆ ಆಹಾರ ಕಿಟ್ ಅನ್ನು ಶಾಸಕ ಎಸ್.ವಿ. ರಾಮಚಂದ್ರ ವಿತರಿಸಿದರು.
ಲಾಕ್ ಡೌನ್ ನಿಂದ ಬಡವರಿಗೆ ಉಂಟಾಗಿರುವ ಸಂಕಷ್ಟ ನಿವಾರಣೆಗೆ ಶಾಸಕರು ಮುಂದಾಗಿದ್ದು, ಸಂಸದ ಜಿ. ಎಂ. ಸಿದ್ದೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸಹಯೋಗದೊಂದಿಗೆ ಬಡವರಿಗೆ ಆಹಾರ ಕಿಟ್ ವಿತರಿಸಿದ್ದಾರೆ. ಉಚ್ಚಂಗಿದುರ್ಗ, ಚಟ್ನಿಹಳ್ಳಿ, ಅಣಜಿಗೆರೆ, ಅರಸೀಕೆರೆ, ಹೊಸಕೋಟೆ, ತವಡೂರು, ಪುಣಭಗಟ್ಟ ಪಂಚಾಯತಿ ವ್ಯಾಪ್ತಿಯ ಬಡ ಕುಟುಂಬದ ಅರ್ಹ ಫಲಾನುಭವಿಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಗಳೂರು ತಹಶೀಲ್ದಾರ್ ಹುಲ್ಲುಮನೆ ತಿಮ್ಮಣ್ಣ, ಇಓ ಅನಂತರಾಜು, ಉಪ ತಹಶೀಲ್ದಾರ್ ಫಾತಿಮಾ, ಜಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪಲ್ಲಗಟ್ಟೆ ಮಹೇಶ್, ಕಂದಾಯ ನಿರೀಕ್ಷಕ ಶ್ರೀಧರ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಕೊಟ್ರಯ್ಯ, ಮುಖಂಡರಾದ ಚಟ್ನಿಹಳ್ಳಿ ರಾಜಪ್ಪ, ವೈ.ಡಿ ಅಣ್ಣಪ್ಪ, ಫಣಿಯಾಪುರ ಲಿಂಗರಾಜ, ಬಾಲೆನಹಳ್ಳಿ ಕೆಂಚನಗೌಡ, ಪರಶುರಾಮಪ್ಪ ಅವರು ಇದ್ದರು.



