ಡಿವಿಜಿಸುದ್ದಿ.ಕಾಂ, ಹರಪನಹಳ್ಳಿ: ಬಳ್ಳಾರಿ ಜಿಲ್ಲೆ ವಿಭಜನೆ ಮಾಡುವುದಾರೆ, ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ಕರ್ನಾಟಕ ಜನ ಶಕ್ತಿ ಸಂಘಟನೆ ಆಗ್ರಹಿಸಿದೆ.
ಪಟ್ಟಣದ ಹರಿಹರ ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆ ಕಾರ್ಯಕರ್ತರು, ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿಸಲ್ಲಿಸಿದರು. ನಂತರ ಮಾತನಾಡಿದ ಸಂಘಟನಕಾರರು,. ಬಳ್ಳಾರಿ ಜಿಲ್ಲೆಗೆ ಸರ್ಕಾರಿ ಕೆಲಸಗಳಿಗೆ ಹರಪನಹಳ್ಳಿ ತಾಲೂಕಿನ ಗಡಿಭಾಗದಿಂದ ಹೋಗಬೇಕಾದರೆ ಒಂದು ದಿನ ಬೇಕಾಗುತ್ತದೆ.
ಜನರಿಗೆ ಸಂಚಾರಿಸುವುದಕ್ಕೆ ತುಂಬಾ ತೊಂದರೆ ಆಗುತ್ತಿದೆ. ಹೀಗಾಗಿ ಬಳ್ಳಾರಿ ಜಿಲ್ಲೆ ವಿಭಜನೆ ಮಾಡುವುದಾದರೆ, ವಿಸ್ತಾರವಾದ ಹರಪನಹಳ್ಳಿ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ತಾಲೂಕು ಅಧ್ಯಕ್ಷ ಮಾರುತಿ, ರಂಗಪುರದ ಮಾರುತಿ, ಹನುಮಂತಪ್ಪ, ಮಂಜುಳಾ, ಮಂಜಣ್ಣ, ರಾಜು, ಕಲಿಂ, ಟಿ.ಬಸವರಾಜ್, ಹನುಮಕ್ಕ, ನಾಗರಾಜ್ ಆಶಾ, ಸ್ವಾಮಿ ಮತ್ತಿತರರು ಇದ್ದರು.



