ಡಿವಿಜಿ ಸುದ್ದಿ, ದಾವಣಗೆರೆ: ಬರದ ಛಾಯೆಯಲ್ಲಿರುವ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಕೆರೆ ಮುಚ್ಚಿ ಬಸ್ ನಿಲ್ದಾಣ ನಿರ್ಮಾಣ ಮಾಡವುದಕ್ಕೆ ಖಡ್ಗ ಸ್ವಯಂ ಸೇವಕ ಸಂಘಟನೆ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಉಪಾಧ್ಯಕ್ಷ ಬಸವರಾಜ್ ಬೆಳ್ಳೂಡಿ, ಉಚ್ಚಂಗಿದುರ್ಗದಲ್ಲಿ ಸ.ನಂ 42 ರಲ್ಲಿ ಬರುವ 4.5 ಎಕರೆ ಕೆರೆ ಜಮೀನನಲ್ಲಿ ಈಗಾಗಲೇ ಒತ್ತುವರಿಯಾಗಿ ಕೇವಲ ಅರ್ಧ ಎಕೆರೆ ಮಾತ್ರ ಉಳಿದಿದ್ದು, ಇದೀಗ ಅದನ್ನು ಮುಚ್ಚಿ ಬಸ್ ನಿರ್ಮಾಣ ಮಾಡಲು ಮುಂದಾಗಿರುವ ಉಚ್ಚಂಗಿದುರ್ಗ ಗ್ರಾಮ ಪಂಚಾಯತಿ ನಿರ್ಧಾರವನ್ನು ಖಂಡಿಸುತ್ತೇವೆ.
ಈ ಬಗ್ಗೆ ಕಳೆದ 2 ವರ್ಷದಿಂದ ಖಡ್ಗ ಸಂಘಟನೆ ಹೋರಾಟ ಮಾಡುತ್ತಾ ಬಂದಿದೆ. ಕೆರೆ ಉಳಿಸುವಂತೆ ಜಿಲ್ಲಾಧಿಕಾರಿ, ತಹಶಿಲ್ದಾರ್ , ಗ್ರಾಮ ಪಂಚಾಯತಿ ಅಧಿಕಾರಿಗಳಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಕುಡಿಯುವುದಕ್ಕೂ ನೀರಿನ ಬರ ಎದುರಿಸುತ್ತಿರುವ ಈ ಗ್ರಾಮದಲ್ಲಿ ಜಲ ಸಂರಕ್ಷಣೆ ಮಾಡಬೇಕಾದ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರೇ ಕೆರೆ ಮುಚ್ಚಲು ಮುಂದಾಗಿದ್ದಾರೆ. ಈ ಬಗ್ಗೆ ಕೇಳಲು ಹೋದರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಕೊಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.