ವಿಜಿ ಸುದ್ದಿ, ಹರಪನಹಳ್ಳಿ : ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಸುಳ್ಳು ಸುದ್ದಿ ಹರಿಬಿಟ್ಟರೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ತಹಶೀಲ್ದಾರ್ ಫಾತಿಮಾ ತಿಳಿಸಿದರು.
ತಹಸೀಲ್ದಾರ್ ನಿರ್ದೇಶನದಂತೆ ಉಪತಹಶೀಲ್ದಾರ್,ಕಂದಾಯ ನಿರೀಕ್ಷಕರೂ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಗ್ರಾಮದಲ್ಲಿ ಧ್ವನಿ ವರ್ಧಕ ಮೂಲಕ ಕೊರೊನಾ ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಅವರು, ಉಚ್ಚoಗಿದುರ್ಗದಲ್ಲಿ ಕರೊನ ರೋಗವಿದೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ಹಾಗಾಗಿ ತಾಲ್ಲೂಕು ವೈದ್ಯಾಧಿಕಾರಿ ಇನಾಯತ್ ಅವರು ಬಳಿ ವರದಿಯನ್ನು ತರಿಸಿಕೊಳ್ಳಲಾಗಿದ್ದು, ಗ್ರಾಮದಲ್ಲಿ ಯಾರಿಗೂ ಕೊರೊನ ರೋಗವಿಲ್ಲ ಎಂದು ತಿಳಿದುಬಂದಿದೆ ಎಂದರು.
ತಹಸೀಲ್ದಾರ್ ನಾಗವೇಣಿ ಮಾರ್ಗದರ್ಶನದಂತೆ ಧ್ವನಿವರ್ಧಕ ಮೂಲಕ ಕರೊನ ರೋಗವಿಲ್ಲ ಎಂದು ಜಾಗೃತಿ ಮುಡಿಸಿದ್ದೇವೆ ಈ ಕುರಿತು ಯಾರು ಸುಳ್ಳು ಸುದ್ದಿಗಳನ್ನೂ ಹಬ್ಬಿಸಬಾರದು ಒಂದು ವೇಳೆ ಸುಳ್ಳು ಸುದ್ದಿಗಳನ್ನು ಫೇಸ್ಬುಕ್,ವಾಟ್ಸಾಪ್, ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿದ್ದು ಕಂಡುಬಂದಲ್ಲಿ ಅಂಥವರ ವಿರುದ್ಧ ಸರ್ಕಾರದ ನಿರ್ದೇಶನದಂತೆ ಕಾನೂನು ಕ್ರಮ ಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಪಾತಿಮಾ, ಕಂದಾಯ ನಿರೀಕ್ಷಕ ಶ್ರೀಧರ್,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್,ಗ್ರಾಮ ಲೆಕ್ಕದಿಕಾರಿ ಮಂಜುನಾಥ್,ಆಶಾ ಕಾರ್ಯಕರ್ತರೂ ಭಾಗವಹಿಸಿದ್ದರು.



