ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯಲ್ಲಿ ಹರಪನಹಳ್ಳಿ ಭಕ್ತರ ಪಾತ್ರ ಹಿರಿದು:ಶ್ರೀ ವಚನಾನಂದ ಸ್ವಾಮೀಜಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಡಿವಿಜಿ ಸುದ್ದಿ, ಹರಪನಹಳ್ಳಿ: ಅಂದು ಬ್ರಿಟಿಷರು ಕಿತ್ತೂರಾಣಿ ಚೆನ್ನಮ್ಮನಿಗೆ ಸುಖಾಸುಮ್ಮನೆ ಮಾನಸಿಕವಾಗಿ ಒತ್ತಡಕ್ಕೆ ಸಿಲುಕುವಂತೆ ಮಾಡಿದ್ದರು. ಅನ್ಯ ದೇಶದಿಂದ ಬಂದ ಬ್ರಿಟಿಷರು ಚೆನ್ನಮ್ಮಳನ್ನು ಹಿಂಸಿಸಿದರು. ಇಂದು ಮಠದಲ್ಲಿ 18 ವಿದೇಶಗಳ ಮಕ್ಕಳು ಸೇವೆ ಮಾಡುತ್ತಿದ್ದಾರೆ. ಇದೇ ಅಲ್ಲವೇ ನಮ್ಮ ಸಾಧನೆ ಎಂದು  ಹರಿಹರದ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ದಶಕಗಳ ಹಿಂದಿನ ಕೆಲವು ಘಟನೆಗಳು, ರಾಜ್ಯದ 84 ಲಕ್ಷ ಭಕ್ತರ ಮನೋಸ್ಥೈರ್ಯವನ್ನು ಕುಗ್ಗಿಸಿತ್ತು. ಅಂಥಹ ಕಾಲದಲ್ಲಿ ಹರಿಹರದಲ್ಲಿ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯಲ್ಲಿ ಹರಪನಹಳ್ಳಿ ಸಮುದಾಯದ ಭಕ್ತರ ಪಾತ್ರ ಹಿರಿದು ಎಂದು ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾಂದ ಸ್ವಾಮಿಗಳು ಹೇಳಿದರು.

ಸಮೀಪದ ತೌಡೂರು ಮತ್ತು ಯರಬಳ್ಳಿ ಗ್ರಾಮಗಳಲ್ಲಿ ಸೋಮವಾರ ನಡೆದ ಹರ ಮಹೋತ್ಸವ ಮತ್ತು ಬೆಳ್ಳಿಬೆಡಗು ಗ್ರಾಮ ಆಹ್ವಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.

ವಿಶ್ವಕ್ಕೆ ಮಾದರಿ ವೈಚಾರಿಕತೆ ಸಾರಿದ ಸಮುದಾಯ ಹರಿಹರ ಪೀಠ ಸ್ಥಾಪನೆಯಲ್ಲಿ ಗೊಂದಲದಗೂಡಾಗಿ ತಲೆತಗ್ಗಿಸುವಂಥ ಘಟನೆಗಳು ನಡೆದವು. ಆದರೆ ಕೇವಲ 1 ವರ್ಷ 6 ತಿಂಗಳ ಅವಧಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪೀಠ ಮನ್ನಣೆ ಪಡೆದಿದ್ದರೆ ಜ್ಯಾತ್ಯಾತೀತವಾಗಿ ಭಕ್ತರು ನೀಡಿದ ಸಹಕಾರ ಹಾಗೂ ಸಮಾಜ ಬಾಂಧವರ ಪರಿಶ್ರಮದಿಂದಾಗಿದೆ.

ನಾಡಿನ ಶ್ರೇಷ್ಠ ಮಠಗಳ ಸಾಲಿನಲ್ಲಿ ಪಂಚಮಸಾಲಿ ಪೀಠವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಧ್ಯಾತ್ಮ, ಅನ್ನ, ಅಕ್ಷರ ದಾಸೋಹಗಳನ್ನು ಏರ್ಪಡಿಸಲಾಗಿದೆ. ವಿಭಿನ್ನ ಎಂಬಂತೆ ಆಗಮಿಸುವ ಸರ್ವ ಭಕ್ತರಿಗೆ ಆರೋಗ್ಯ ನೆಮ್ಮದಿ ಸಿಗುವಂತೆ ಮಾಡಲು ವಿವಿಧ ಔಷಧ ಸಸ್ಯಗಳ ಸಂಗ್ರಹಿಸಿ ಕ್ಯಾನ್ಸರ್ ಮುಕ್ತ ನಾಡು ನಿರ್ಮಾಣದ ಕನಸಿದೆ ಎಂದರು.

ಮಕರ ಸಂಕ್ರಾಂತಿಯ ದಿನದಂದು ಸರ್ವರು ಎಳ್ಳು-ಬೆಲ್ಲ ಸಕ್ಕರೆ ವಿನಿಯೋಗಿಸಿಕೊಂಡು ಪರಸ್ಪರ ಆತ್ಮೀಯತೆಯಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದಾರೆ. ಈ ಕಾರಣದಿಂದ ಹರಿಹರ ಪಂಚಮಸಾಲಿ ಪೀಠದಲ್ಲಿ ಜನವರಿ 14, 15ರಂದು ಕುಂಭಮೇಳ ಒಳಗೊಂಡ ಹರ ಮಹೋತ್ಸವ ಮತ್ತು ಬೆಳ್ಳಿ ಬೆಡಗು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕೇವಲ ಪಂಚಮಸಾಲಿ ಸಮುದಾಯದವರು ಮಾತ್ರವಲ್ಲದೆ ನಾಡಿನ ಎಲ್ಲಾ ಸಮುದಾಯದ ಬಾಂಧವರು ಪಾಲ್ಗೊಂಡು ಮನಸ್ಸುಗಳನ್ನು ಕೂಡಿಸುವ ಕೆಲಸ ಮಾಡೋಣ ಎಂದರು.

ಹರಪನಹಳ್ಳಿ ತಾಲೂಕಿಗೆ ಮುಂದಿನ ದಿನಗಳಲ್ಲಿ ಸ್ಥಳೀಯರೆ ಅಧಿಪತ್ಯ ಸ್ಥಾಪನೆ ಮಾಡಲಿದ್ದಾರೆ. ಹೊರಗಿನವರಿಗೆ ಸ್ಥಳೀಯರ ಸಮಸ್ಯೆಯ ಅರಿವು ಇರುವುದಿಲ್ಲ. ಸ್ಥಳೀಯರು ಅಧಿಕಾರ ವಹಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ.

ನಾನು 86 ದೇಶಗಳಲ್ಲಿ ಸುತ್ತಾಡಿ ಯೋಗಾಭ್ಯಾಸ ನೀಡಿದ್ದೇನೆ. ಮನಸ್ಸು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಹತ್ತು ನಿಮಿಷವಾದರೂ ಯೋಗಾಭ್ಯಾಸವನ್ನು ಮಾಡಿದರೆ ಒಳಿತು.

ನಾನು ಒಂದೂವರೆ ವರ್ಷದ ಹಿಂದೆ ಪೀಠಾಧ್ಯಕ್ಷರಾಗುವುದಕ್ಕೂ ಮೊದಲು ಸಾಕಷ್ಟು ಅವಕಾಶಗಳು ಬಂದರೂ , ಅವುಗಳನ್ನೆಲ್ಲವನ್ನೂ ತ್ಯಜಿಸಿ ಪೀಠಾಧ್ಯಕ್ಷನಾಗಿದ್ದೇನೆ ಎಂದರು.ಜನವರಿ 14 ಮತ್ತು 15 ಎರಡು ದಿನ ಯಾರ ಮನೆಯಲ್ಲೂ ಸಹ ಒಲೆ ಹಚ್ಚಬಾರದು ಏಕೆಂದರೆ ಈ ಎರಡು ದಿನಗಳು ಹರ ಮಹೋತ್ಸವದಲ್ಲಿ ಕುಟುಂಬ ಸಮೇತ ಪಾಲ್ಗೊಂಡು ಅಲ್ಲೇ ಎಲ್ಲರೂ ಊಟ ಮಾಡಬೇಕೆಂದು ಹೇಳಿದರು.

ಹರಿಹರದಲ್ಲಿ ಜ.14 ಮತ್ತು 15 ರಂದು ನಡೆಯಲಿರುವ ಹರ ಜಾತ್ರೆ ಹಾಗೂ ಬೆಳ್ಳಿ ಬೆಡಗು ಕಾರ್ಯಕ್ರಮಕ್ಕೆ ನಾಡಿನ ಮಠಾಧೀಶರು, ರಾಜಕೀಯ ಧುರೀಣರು, ನಟ-ನಟಿಯರು ಪಾಲ್ಗೊಳ್ಳಲ್ಲಿದ್ದು, ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸೇರುವ ನಿರೀಕ್ಷೆಯದೆ ಎಂದರು.

ಭಕ್ತರು ಗೃಹ ಪ್ರವೇಶ, ಮನೆ ಶುಭ ಸಮಾರಂಭಗಳಿಗೆ ಮಠಾಧೀಶರನ್ನು ಅಹ್ವಾನ ನೀಡುವುದು ಸಾಮಾನ್ಯ. ನಾಡಿನ ಸಾಂಸ್ಕೃತಿಕಇತಿಹಾಸದಲ್ಲಿ ಮಠಾಧೀಶರು ಮಹೋತ್ಸವಕ್ಕೆ ಭಕ್ತರನ್ನು ಅಹ್ವಾನ ಮಾಡುತ್ತಿರುವುದು ಇತಿಹಾಸ ಆಗಲಿದೆ ಜ್ಯಾತ್ಯಾತೀತವಾಗಿ ಮಹಿಳೆಯರು ಸಹಿತ ಕಾರ್ಯಕ್ರಮಕ್ಕೆ ಭಾಗವಹಿಸಬೇಕು ಎಂದು ಅಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಬೆಟ್ಟನಗೌಡ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ, ಖಜಾಂಚಿ ಶಶಿಪೂಜಾರ್ ಮುಖಂಡರಾದ ಚೆನ್ನಬಸವನಗೌಡ, ಶಿವಾನಂದ ಗೌಡ್ರು, ಕ್ಯಾರಕಟ್ಟಿ ಕೊಟ್ರು ಗೌಡ್ರು, ನಾಗರಾಜಪ್ಪ, ನಂದ್ಯಪ್ಪ, ಕೆಂಚಪ್ಪ, ಶಂಬಣ್ಣ, ನಾಗರಾಜಪ್ಪ, ಎಸ್ ಕೆಂಚಪ್ಪ, ಷಣ್ಮುಖಪ್ಪ, ಅಜ್ಜಯ್ಯ, ಹಾಲೇಶಪ್ಪ, ಮರುಳಸಿದ್ದಪ್ಪ, ಮಹೇಂದ್ರ, ಹನುಮಂತ ಮುಂತಾದ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *