ಡಿವಿಜಿ ಸುದ್ದಿ, ದಾವಣಗೆರೆ: ತಾಲ್ಲೂಕಿನ ಧಾರ್ಮಿಕ ಪ್ರಸಿದ್ಧ ಗುಮ್ಮನೂರು ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಮಾ.05 ರಂದು ಗುರುವಾರ ಬೆಳೆಗ್ಗೆ 6.30 ಕ್ಕೆ ನಡೆಯಲಿದೆ. ರಥೋತ್ಸವ ಮುಗಿದ ನಂತರ ಬೆಳೆಗ್ಗೆ 10 ಗಂಟೆಗೆ ಸಾಮೂಹಿಕ ವಿವಾಹ . ನೆರವೇರಲಿದೆ.
ಮಾ.04 ಬುಧವಾರ ಸಾಯಂಕಾಲ ಜವಳ, ಉರುಳು ಸೇವೆಗಳು ನಡೆಯಲಿವೆ. ಗುರುವಾರ ಬೆಳೆಗ್ಗೆ 11 ಗಂಟೆಗೆ ಗ್ರಾಮದಲ್ಲಿ ರಥೋತ್ಸವದ ಪ್ರಯುಕ್ತ ಜಂಗಿಕುಸ್ತಿ ನಡೆಯಲಿದೆ. ರಾತ್ರಿ ಗ್ರಾಮದ ಯುವಕರಿಂದ “ರೈತ ರಾಜ್ಯದಲ್ಲಿ ರೌಡಿಗಳ ದರ್ಬಾರ್ ” ಅರ್ಥಾತ್ ಈ ಮಡದಿಗೇನು ಗೊತ್ತು ಮಾಂಗಲ್ಯದ ಬೆಲೆ ಎನ್ನುವ ನಾಟಕ ಪ್ರದರ್ಶನಗೊಳಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸ್ವಾಮಿಯ ಆಶೀರ್ವಾದ ಪಡೆಯಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.



