ಡಿವಿಜಿ ಸುದ್ದಿ, ದಾವಣಗೆರೆ: ರಾಜ್ಯ ಸರ್ಕಾರ ಕೊರೊನಾ ಸಂಕಷ್ಟದಲ್ಲಿ ಇರುವವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಆಟೋ ಚಾಲಕ, ಮಡಿವಾಳ, ಕ್ಷೌರಿಕರು, ಟ್ಯಾಕ್ಸಿ ಚಾಲಕರಿಗೆ ಮಾತ್ರ 5 ಸಾವಿರ ರೂಪಾಯಿ ಸಹಾಯ ಧನ ಘೋಷಿಸಿದೆ. ಆದರೆ, ಸರ್ಕಾರಕ್ಕೆ ಟೈಲರ್ ಗಳು ಕಣ್ಣಿಗೆ ಕಾಣಲಿಲ್ಲವೇ ಎಂದು ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಕೆ ಜಿ ಯಲ್ಲಪ್ಪ ಪ್ರಶ್ನಿಸಿದ್ದಾರೆ.

ಲಾಕ್ ಡೌನ್ ನಿಂದ ಟೈಲರ್ ಗಳು ಕಳೆದ 45 ದಿನಗಳಿಂದ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದಾರೆ. ಮಡಿವಾಳರು, ಕ್ಷೌರಿಕರು, ಆಟೋಚಾಲಕರು, ಕಟ್ಟಡ ಕಾರ್ಮಿಕರಿಗೆ ಕೊಟ್ಟಂತೆ ಕೊಡಲೇ ಸಂಕಟದಲ್ಲಿರುವ ಎಲ್ಲ ಟೈಲರ್ ಗಳಿಗೆ 5 ಸಾವಿರ ರೂಪಾಯಿಗಳ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.



