ಡಿವಿಜಿಸುದ್ದಿ.ಕಾಂ, ದಾವಣಗೆರೆ: ಕರಾವಳಿ ಸೊಗಡಿನ ಚಿತ್ರ ಲುಂಗಿ ಅ.11 ರಂದು ರಾಜ್ಯದಾದ್ಯಂತ 80 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಅರ್ಜುನ್ ಲೂವಿಸ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸ್ಯದ ಲೇಪನವಿರುವ ಲುಂಗಿ ಚಿತ್ರ ಕರಾವಳಿ ಸಂಸ್ಕೃತಿ ಬಿಂಬಿಸುವಂತಿದ್ದು, ಯುವಜನತೆಗೆ ಉತ್ತಮ ಸಂದೇಶ ಒಳಗೊಂಡಿದೆ. ಉತ್ತಮ ಗಾಯಕರ ನವಿರಾದ ಸಂಗೀತವಿದ್ದು,ಲುಂಗಿ ಒಂದು ಮನೋರಂಜನಾತ್ಮಕ ಚಿತ್ರವಾಗಿ ಎಲ್ಲಾ ರೀತಿಯ ಪ್ರೇಕ್ಷಕರಿಗೂ ಇಷ್ಟವಾಗುವಂತಿದೆ ಎಂದರು. ಆಗಸ್ಟ್ 30 ರಂದು ಲುಂಗಿ ಚಲನಚಿತ್ರದ ಟ್ರೈಲರ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ ಎಂದರು.
ನಾಯಕ ಪ್ರಣವ್ ಹೆಗ್ಡೆ ಮಾತನಾಡಿ ಇದು ನನ್ನ ಮೊದಲ ಚಿತ್ರವಾಗಿದೆ.ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿ ನಡೆದಿದೆ. ಉತ್ತಮ ಕಥೆ, ಸಂಗೀತ,ತಾಂತ್ರಿಕತೆ ಒಳಗೊಂಡಿದೆ. ಜನರು ಪ್ಎರೋತ್ಸಾಹ ನೀಡಬೇಕು. ಚಿತ್ರಮಂದಿರಗಳಿಗೆ ಬಂದು ಚಲನಚಿತ್ರ ವೀಕ್ಷಿಸಬೇಕು ಎಂದರು.
ಸಂಗೀತ ನಿರ್ದೇಶಕ ಪ್ರಸಾದ್ ಶೆಟ್ಟಿ ಮಾತನಾಡಿ ಚಿತ್ರದಲ್ಲಿ ೫ ಹಾಡುಗಳಿದ್ದು ಎಲ್ಲಾ ಹಾಡುಗಳಿಗೂ ಸಂಸ್ಕೃತಿಕ ಲೇಪನವಿದೆ.ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಅರ್ಮಾನ್ ಮಲಿಕ್, ಶ್ವೇತಾ ಮೋಹನ್, ಸಂಚಿತ್ ಹೆಗ್ಡೆ ಹಾಡುಗಳನ್ನಾಡಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ನಾಯಕಿ ಅಹಲ್ಯ ಸುರೇಶ್, ರಿಜೋ ಪಿ ಜಾನ್,ವಿ.ಜೆ ವಿನೀತ್ ಇದ್ದರು.



