ಡಿವಿಜಿ ಸುದ್ದಿ, ಬೆಂಗಳೂರು: ಕನ್ನಡ ಬಾಕ್ಸ್ ಆಫೀಸ್ ಸುಲ್ತಾನ ಚಾಲೇಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಒಟ್ಟಿಗೆ ನಟನೆಯ ಸಿನಿಮಾ ಯಾವಾಗ ತೆರೆ ಮೇಲೆ ಬರುತ್ತೇ ಅಂತಾ ಅಭಿಮಾನಿಗಳು ಕಾಯ್ತಾ ಇದ್ದಾರೆ. ಆದ್ರೆ, ಇವತ್ತು ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ನವ ನಟ ಧ್ರುವನ್ ಹಾಗೂ ಪ್ರಿಯಾ ವಾರಿಯರ್ ನಟನೆ ಇನ್ನೂ ಹೆಸರಿಡದ ಸಿನಿಮಾ ಪೂಜೆಗೆ ಇವರಿಬ್ಬರೂ ಒಟ್ಟಿಗೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಶಿವಣ್ಣ, ಒಳ್ಳೆ ಕಥೆ ಸಿಕ್ಕರೆ ಖಂಡಿತಾ ದರ್ಶನ್ ಜೊತೆ ಒಟ್ಟಿಗೆ ಸಿನಿಮಾ ಮಾಡುತ್ತೇವೆ.
ನಾನು ದರ್ಶನ್ ಯಾವಗಲೂ ಈ ವಿಚಾರದ ಬಗ್ಗೆ ಮಾತನಾಡುತ್ತಿರುತ್ತೇವೆ. ಸಿನಿಮಾ ಮಾಡಿದರೆ ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು. ಆ ರೀತಿಯ ಕಥೆ ಬಂದರೆ ಖಂಡಿತಾ ಇಬ್ಬರು ಒಟ್ಟಿಗೆ ಮಾಡುತ್ತೇವೆ ಎಂದು ಹೇಳಿದರು.
ಚಾಲೇಜಿಂಗ್ ಸ್ಟಾರ್ ದರ್ಶನ್ ಮಾತನಾಡಿ, ಶಿವಣ್ಣ ಸೀನಿಯರ್ ಅವರು ಲಾಂಗ್ ಹಿಡಿದರೆ ಮುಂದೆ ನಿಂತರೆ ನಾನು ಅವರ ಹಿಂದೆ ನಿಲ್ಲುತ್ತೇನೆ. ಡೈರೆಕ್ಟರ್ ಕಥೆ ಮಾಡಿಕೊಂಡು ಬಂದರೆ ಖಂಡಿತಾ ಸಿನಿಮಾ ಮಾಡುತ್ತೇವೆ ಎಂದ್ರು.



