ಡಿವಿಜಿಸುದ್ದಿ, ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾದೇಶಿಕ ಸಮಗ್ರ ಅರ್ಥಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಕರ್ನಾಟಕ ಪ್ರಾದೇಶಿಕ ರೈತ ಸಂಘ ಅಧ್ಯಕ್ಷ ಎಂ.ಎಸ್.ಕೆಶಾಸ್ತ್ರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ನೂತನ ಒಪ್ಪಂದಕ್ಕೆ ಸಹಿ ಹಾಕುವುದರಿಂದ ದೇಶದ ಹೈನುಗಾರಿಕೆ ಅವಲಂಬಿಸಿರುವ ಕೋಟ್ಯಾಂತರ ರೈತರು ಮತ್ತು ಮಹಿಳೆಯರಿಗೆ ಭಾರೀ ನಷ್ಟ ಉಂಟಾಗಲಿದೆ. ಹೊರ ದೇಶದಿಂದ ಹಾಲು ಮತ್ತು ಇತರೆ ಉತ್ಪನ್ನಗಳನ್ನು ಆಮದು ಮಾಡಿಕೊಂಡರೆ, ದೇಶದ ಒಳಗಿನ ರೈತರ ಪರಿಸ್ಥಿತಿ ಸೂಚನೀಯವಾಗಲಿದೆ. ಹೀಗಾಗಿ ಪ್ರಧಾನಿ ಅವರು ಈ ಒಪ್ಪಂದಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದರು.



