ಡಿವಿಜಿ ಸುದ್ದಿ, ದಾವಣಗೆರೆ: ಡ್ರಗ್ಸ್ ವಿಚಾರದಲ್ಲಿ ನಟ ಚಿರಂಜೀವಿ ಸರ್ಜಾ ಹೆಸರು ಹೇಳಿದ್ದು ನನಗೆ ತುಂಬಾ ಬೇಸರವಾಯಿತು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.
ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ನಗರದ ಬಾಪೂಜಿ ಗೆಸ್ಟ್ ಹೌಸ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರನ್ನು ಹೇಳುತ್ತಿರುವುದು ನನಗೆ ತುಂಬಾ ಬೇಸರವಾಯಿತು. ಚಿರು ಸತ್ತು ಮೂರು ತಿಂಗಳು ಆಗಿದೆ. ಅವನು ಎಲ್ಲಿದ್ದಾನೋ, ಹೇಗಿದ್ದಾನೋ ಗೊತ್ತಿಲ್ಲ. ಸಾಬೀತು ಆದ್ರೆ ಶಿಕ್ಷೆ ಕೊಡಲು ಆಗುತ್ತಾ? ದಯವಿಟ್ಟು ಕೆಟ್ಟದಂತೂ ಮಾತನಾಡಬೇಡಿ ಎಂದು ದರ್ಶನ್ ಮನವಿ ಮಾಡಿಕೊಂಡರು.

ಒಂದು ಕ್ಲಾಸ್ ಎಂದ ಮೇಲೆ ಫಸ್ಟ್ ರ‍್ಯಾಂಕ್ ವಿದ್ಯಾರ್ಥಿ ಇರುತ್ತಾರೆ. ಲಾಸ್ಟ್ ಬೆಂಚ್ ಸ್ಟೂಡೆಂಟ್ ಕೂಡ ಇರುತ್ತಾರೆ. ಅದಕ್ಕೆ ಇಡೀ ಕ್ಲಾಸ್ ಜಿರೋ ಅನ್ನೊದಕ್ಕೆ ಆಗಲ್ಲ. ಅದೇ ರೀತಿ ಸ್ಯಾಂಡಲ್‍ವುಡ್ ನಲ್ಲಿಯೇ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ ಎಂದರೆ ತಪ್ಪಾಗುತ್ತೆ ಎಂದರು.
ನಾನು ಈ ಫೀಲ್ಡ್‌ಗೆ ಬಂದು 28 ವರ್ಷ ಆಯಿತು. ಲೈಟ್ ಬಾಯ್‍ಯಿಂದ ಇಲ್ಲಿವರೆಗೂ ಬಂದಿದ್ದೇನೆ. ಆದರೆ ಇದುವರೆಗೂ ನಮಗೆ ಈ ಅನುಭವ ಆಗಿಲ್ಲ. ಈ ಬಗ್ಗೆ ನಾನು ಕೇಳಿಲ್ಲ ನೋಡಿಲ್ಲ. ಡ್ರಗ್ಸ್ ಕೇಸ್ ಇಡೀ ಸ್ಯಾಂಡಲ್‍ವುಡ್‍ಗೆ ಮಾತ್ರ ಅಲ್ಲ. ಕರ್ನಾಟಕಕ್ಕೆ ಕೆಟ್ಟ ಹೆಸರು ಎಂದರು.ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಾದು ನೋಡೋಣ, ಸ್ಯಾಂಡಲ್‍ವುಡ್‍ನಲ್ಲಿ ಮಾತ್ರ ಅಲ್ಲ, ಎಲ್ಲಾ ಕಡೆ ಇರಬಹುದು ಎಂದರು.



