Connect with us

Dvgsuddi Kannada | online news portal | Kannada news online

ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ 27,022 ವಿದ್ಯಾರ್ಥಿಗಳು ಗೈರು..!

ಪ್ರಮುಖ ಸುದ್ದಿ

ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ 27,022 ವಿದ್ಯಾರ್ಥಿಗಳು ಗೈರು..!

ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂದೂಡಿದ್ದ  ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಇಂದು ನಡೆಯಿತು.  ಕೋವಿಡ್-19 ಭಯದಿಂದ 27,022 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ.

puc

ಪರೀಕ್ಷೆ ತಗೆದುಕೊಂಡ  5,95,997 ವಿದ್ಯಾರ್ಥಿಗಳಲ್ಲಿ 5,68,975 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ. ಜೊತೆಗೆ ಹೊರ ರಾಜ್ಯದ 1,889 ವಿದ್ಯಾರ್ಥಿಗಳ ಪರೀಕ್ಷೆ ಬರೆದರೆ, 18,529 ವಿದ್ಯಾರ್ಥಿಗಳು ಅಂತರ್ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಪಿಯುಸಿ ಬೋರ್ಡ್ ಮಾಹಿತಿ ನೀಡಿದೆ. ಕಲಬುರಗಿ ಹಾಗೂ  ಬೆಂಗಳೂರಿನ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಗೈರಾಗಿದ್ದಾರೆ.

ಮಾರ್ಚ್ ನಲ್ಲಿ ನಡೆಯಬೇಕಿದ್ದ ಪರೀಕ್ಷೆ ಇಂದು ಸುಸೂತ್ರವಾಗಿ ನಡೆದಿದೆ. ಯಾವುದೇ ಸಮಸ್ಯೆ ಆಗಿಲ್ಲ. 5.95 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಎಲ್ಲಾ ಕೇಂದ್ರದಲ್ಲಿ ಮಾಡಿದ್ದೆವು. ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನಿಂಗ್ ಮಾಡಿದ್ದೇವೆ. ಯಾವುದೇ ಸಮಸ್ಯೆ ಇಲ್ಲದೆ ಪರೀಕ್ಷೆ ಮುಕ್ತಾಯವಾಗಿದೆ. ಪರೀಕ್ಷೆಗೆ ಗೈರಾದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು  ಪಿಯುಸಿ ನಿರ್ದೇಶಕ ಡಾ.ರೇಜು ತಿಳಿಸಿದ್ದಾರೆ.

ಯಾವ ಜಿಲ್ಲೆ ಎಷ್ಟು ವಿದ್ಯಾರ್ಥಿಗಳು ಗೈರು?

ಬೆಂಗಳೂರು ಉತ್ತರ – 1646
ಬೆಂಗಳೂರು ದಕ್ಷಿಣ- 1675
ಬೆಂಗಳೂರು ಗ್ರಾಮಾಂತರ- 341
ರಾಮನಗರ- 488
ಬಳ್ಳಾರಿ- 1261
ಚಿಕ್ಕೋಡಿ- 1359
ಬೆಳಗಾವಿ- 1044
ಬಾಗಲಕೋಟೆ- 696

ಬಿಜಾಪುರ- 1476
ಬೀದರ್- 899
ದಾವಣಗೆರೆ- 1292
ಚಿತ್ರದುರ್ಗ- 1040
ಚಿಕ್ಕಮಗಳೂರು- 377
ಗದಗ- 669
ಹಾವೇರಿ- 457
ಧಾರವಾಡ- 917

ಕಲಬುರಗಿ- 1750
ಯಾದಗಿರಿ- 568
ಹಾಸನ- 535
ಚಿಕ್ಕಬಳ್ಳಾಪುರ- 442
ಕೋಲಾರ್- 730
ಚಾಮರಾಜನಗರ- 268
ಮೈಸೂರು- 1401
ಮಂಡ್ಯ- 682

ಉತ್ತರ ಕನ್ನಡ- 435
ಕೊಪ್ಪಳ- 463
ರಾಯಚೂರು- 1347
ದಕ್ಷಿಣ ಕನ್ನಡ- 466
ಉಡುಪಿ- 163
ಶಿವಮೊಗ್ಗ- 538
ತುಮಕೂರು- 1457
ಕೊಡಗು- 140

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top