ಡಿವಿಜಿ ಸುದ್ದಿ, ಬೆಂಗಳೂರು: ನಾನು ಕೊಲಂಬೊ ಹೋಗಿದ್ದು ನಿಜ, ಹೋಗುವುದು ತಪ್ಪಾ..? ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕೊಲಂಬೊಗೆ ಹೋಗಿದ್ದು ನಿಜ. ಭಾರತದಿಂದ ಕೊಲಂಬೊಗೆ ಹೋಗಬಾರದು ಎಂದೇನು ಇಲ್ಲ. ಕೊಲಂಬೊಗೆ ಹೋಗಬಾರದು ಎಂದು ಬ್ಯಾನ್ ಮಾಡಿಲ್ಲ. ಒಂದು ರಿಂದ ಒಂದುವರೆ ವರ್ಷಕ್ಕೊಮ್ಮೆ ಕೊಲಂಬೊಗೆ ಹೋಗಿ ಬರುತ್ತೇನೆ ಎಂದು ಟಿವಿ9 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಈಗಾಗಲೇ ನಾನು 8 ಬಾರಿ ಕೊಲಂಬೊಗೆ ಹೋಗಿ ಬಂದಿದ್ದೇನೆ. ಕೊಲಂಬೊಗೆ ನಾನು ಒಬ್ಬನೇ ಹೋಗಿಲ್ಲ, ಎಲ್ಲ ರಾಜಕಾರಣಿಗಳು ಹೋಗಿದ್ದಾರೆ. ಕೊಲಂಬೊ ಕ್ಯಾಸಿನೋಗೆ ಹೋಗಿದ್ದರೂ, ಅದು, ಕಾನೂನು ಬದ್ಧವಾಗಿದೆ.ಕ್ಯಾಸಿನೋಗೆ ಹೋಗಬಾರದು ಅಂತಾ ಎಲ್ಲಿದೆ. ಅದೇನು ಕಾನೂನು ಬಾಹಿರನಾ ಎಂದು ಪ್ರಶ್ನೆ ಮಾಡಿದ್ದಾರೆ.
ಡ್ರಗ್ಸ್ ವಿಚಾರದಲ್ಲಿ ನಾನು ತಪ್ಪು ಮಾಡಿದ್ದರೆ, ಗಲ್ಲು ಶಿಕ್ಷೆ ನೀಡಿಲಿ . ನಾನೇ ಬರೆದು ಕೊಡುತ್ತೇನೆ. ಸಾರ್ವಜನಿಕ ಜೀವನ ಇಂತತಹ ಕೆಲಸ ಮಾಡಿದ್ದಾರೆ. ಗಲ್ಲಿಗೆ ಏರಿಸಲಿ. 2014 ಜೆಡಿಎಸ್ 28 ಎಂಎಲ್ ಎ ಜೊತೆ ಹಾಗೂ ಕುಮಾರ ಸ್ವಾಮಿಯೂ ಕೊಲಂಬೊ ಹೋಗಿದ್ದೇವೆ. ಬೇರೆ ಪಕ್ಷಕ್ಕಿಂತ ಬಿಜೆಪಿ ಅವರೇ ಹೆಚ್ಚು ಜನರು ಕೊಲಂಬೊ ಹೋಗಿದ್ಧಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.



