ಡಿವಿಜಿ ಸುದ್ದಿ, ಬೆಂಗಳೂರು: ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆಫ್ರಿಕಾದ ಬೆನಾಲ್ಡ್ ಉಡೆನ್ನಾ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಉಡೆನ್ನಾನಿಂದ 12 ಗ್ರಾಂ ಕೊಕೇನ್ ಜಪ್ತಿ ಮಾಡಲಾಗಿದೆ. ಮೊದಲಿಗೆ ಬ್ಲಾಕೀ, ಕೋಕ್ ಹಾಗೂ ಜಾನ್ ಎಂಬ ಮೂವರು ಡ್ರಗ್ಸ್ ಪೆಡ್ಲರ್‌ಗಳು ಇರುವುದಾಗಿ ತಿಳಿದು ಬಂದಿತ್ತು. ಆದರೆ, ಬಂಧಿತ ಆರೋಪಿ ಬೆನಾಲ್ಡ್ ಉಡೆನ್ನಾನೇ ಈ ಮೂರು ಹೆಸರುಗಳಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.



