ಡಿವಿಜಿ ಸುದ್ದಿ, ದಾವಣಗೆರೆ: ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ನಾನು ಶಾಸಕ ಜಮೀರ್ ಖಾನ್ ಹೆಸರು ಎಲ್ಲಿಯೂ ಹೇಳಿಲ್ಲ. ನಾನು ಕೊಲಂಬೊಗೆ ಹೋಗಿದ್ದೀರಾ..? ಇಲ್ಲವಾ ..? ಅಷ್ಟೇ ಕೇಳಿದ್ದು. ಇದೀಗ ಅವರು ನಾನು ಹೋಗಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ಈಗ ನನ್ನ ಹೋರಾಟ ಏನೀದ್ದರೂ ಜಮೀರ್ ಅಪ್ತ ಫಾಝಿಲ್ ವಿರುದ್ಧವೇ ಹೊರತು ಜಮೀರ್ ವಿರುದ್ಧ ಅಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಮಾಧ್ಯಮ ಹಾಗೂ ಸಾಮಾಜಿ ಜಾಲತಾಣದಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ಹಂಚಿಕೊಂಡ ಹಿನ್ನೆಲೆ ಸಿಸಿಬಿ ಪೊಲೀಸರ್ ವಿಚಾರಣೆಗೆ ಹಾಜರಾಗುವಂತೆ ಪ್ರಶಾಂತ್ ಸಂಬರಗಿ ಅವರಿಗೆ ನೋಟಿಸ್ ನೀಡಿತ್ತು. ಇಂದು ವಿಚಾರಣಗೆ ಹಾಜರಾದ ನಂತರ ಮಾತನಾಡಿದ ಅವರು, ಸಿಸಿಬಿ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ನಾನು ಕೊಟ್ಟ ದಾಖಲೆ ಸಾಕಾಗಿಲ್ಲ. ಇನ್ನಷ್ಟು ದಾಖಲೆ ಬೇಕು ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಫಾಝಿಲ್ ಬಂಧನ ನಂತರ ಮತ್ತೆ ಬರುವಂತೆ ಸೂಚನೆ ನೀಡಿದ್ದಾರೆ. ನಾನು ಕೂಡ ವಿಚಾರಣಗೆ ಬರುತ್ತೇನೆ ಎಂದು ಹೇಳಿದ್ದೇನೆ ಎಂದರು.

ಇನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಶ್ರೀಲಂಕಾದ ಕೊಲಂಬೊಗೆ ಹೋಗಿದ್ದರೂ, ಇಲ್ಲವೋ..? ಎಂಬ ಪ್ರಶ್ನೆ ಮಾಡಿದ್ದೆ. ಅವರು ಮೊದಲು ನಾನು ಹೋಗಿಲ್ಲ ಎಂದರು. ಈಗ ನಾನು ಹೋಗಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ನಾನು ಶಾಸಕರು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ಈಗ ಜಮೀರ್ ಅಪ್ತ ಫಾಝಿಲ್ ಮತ್ತು ಶಾಕರ ನಡುವೆ ಇರುವ ಸಂಬಂಧ ಬಗ್ಗೆ ವಿಚಾರಣೆ ನಡೆಸಬೇಕಿದೆ ಎಂದರು.
ಇಂದು ಸಿಸಿಬಿ ನನ್ನ ಬಳಿ ಇರುವ ಡಿಜಿಟಲ್ ದಾಖಲೆ ಒದಗಿಸಿದ್ದೇನೆ. ನಾನು ಯಾವುದೇ ಹಿಟ್ ಅಂಡ್ ರನ್ ಮಾಡುತ್ತಿಲ್ಲ. ಇದೊಂದು ಗಂಭೀರ ವಿಚಾರ. ನಾನು ಯಾವುದೇ ನಟ, ನಟಿಯರ ಬಗ್ಗೆ ಆರೋಪ ಮಾಡಿಲ್ಲ. ನಟಿ ಸಂಜನಾ ವಿರುದ್ಧವೂ ಯಾವುದೇ ದಾಖಲೆ ನೀಡಿಲ್ಲ. ನಾನು ಯಾವುದೇ ಪಕ್ಷದ ಪರವೂ ಇಲ್ಲ. ಕರ್ನಾಟಕದ ಯುವಕರ ಬಗ್ಗೆ ಮಾತ್ರ ನನಗೆ ಕಳಕಳಿ ಹೊಂದಿದ್ದೇನೆ. ನಾನು ಯಾವ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ ಎಂದರು.



