ಡಿವಿಜಿ ಸುದ್ದಿ, ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿಸೇರಿದಂತೆ ಇತರೆ 4 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಸೆ. 16 ವರೆಗೆ ಮುಂದೂಡಲಾಗಿದೆ.
NDSP ವಿಶೇಷ ಕೋರ್ಟ್ 5 ಜನರ ಜಾಮೀನು ಅರ್ಜಿಯನ್ನು ಮುಂದೂಡಿದೆ. ಸರ್ಕಾರ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು 2 ದಿನ ಕಾಲಾವಕಾಶ ಕೇಳಿದ ಹಿನ್ನೆಲೆ ಅರ್ಜಿ ವಿಶೇಷ ಕೋರ್ಟ್ ಅರ್ಜಿ ವಿಚಾರಣೆ ಮುಂದೂಡಿದೆ.
ನಟಿ ರಾಗಿಣಿ, ರಾಹುಲ್, ಶಿವಪ್ರಕಾಶ್, ವಿನಯ್ ಕುಮಾರ್ ಹಾಗೂ ವೈಭವ್ ಜೈನ್ ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿದ್ದು, ಇನ್ನು ಎರಡು ದಿನದ ಸಿಸಿಬಿ ವಶದಲ್ಲಿ ಇರಲಿದ್ದಾರೆ.



