ಡಿವಿಜಿ ಸುದ್ದಿ, ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮೂರು ದಿನ ಮುಂದೂಡಿಕೆಯಾಗಿದೆ.
ವಿಚಾರಣೆ ನಡೆಸಿದ ಎನ್ ಡಿಎಸ್ ಪಿ ವಿಶೇಷ ಕೋರ್ಟ್, ನಟಿ ರಾಗಿಣಿ ಜಮೀನು ಅರ್ಜಿ ವಿಚಾರಣೆಯನ್ನು ಇಂದು ನಡೆಯಿತು. ಈ ವೇಳೆ ಹೊಸ ಎಸ್ ಪಿಪಿ ನೇಮಕ ಹಿನ್ನೆಲೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಸೆ. 19 ವರೆಗೆ ಅರ್ಜಿ ವಿಚಾರಣೆ ಮೂಂದೂಡಿಕೆಯಾಗಿದೆ.
ಹೊಸ ಅಭಿಯೋಜಕರ ನೇಮಕ ಹಿನ್ನೆಲೆ. ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೋರಿದ್ದರಿಂದ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಸದ್ಯಕ್ಕೆ ಸೆ. 19ಕ್ಕೆ ವಿಶೇಷ ಕೋರ್ಟ್ ಅರ್ಜಿ ವಿಚಾರಣೆ ಮುಂದೂಡಿದೆ.



