Connect with us

Dvgsuddi Kannada | online news portal | Kannada news online

ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ನಟಿ ಸಂಜನಾ ಬಂಧನ; 5 ಐದು ದಿನ ಕಸ್ಟಡಿಗೆ ಪಡೆದ ಸಿಸಿಬಿ ಪೊಲೀಸರು

ಪ್ರಮುಖ ಸುದ್ದಿ

ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ನಟಿ ಸಂಜನಾ ಬಂಧನ; 5 ಐದು ದಿನ ಕಸ್ಟಡಿಗೆ ಪಡೆದ ಸಿಸಿಬಿ ಪೊಲೀಸರು

ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿನ ಡ್ರಗ್ಸ್ ಮಾಫಿಯಾ  ತನಿಖೆ  ನಡೆಸುತ್ತಿರುವ  ಸಿಸಿಬಿ ಪೊಲೀಸರು,  ಇಂದು ನಟಿ ಸಂಜನಾ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಐದು ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಇಂದಿರಾನಗರದ ಸಂಜನಾ  ಮನೆ ಮೇಲೆ  ಬೆಳಗ್ಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಮನೆಯಲ್ಲಿ ಕೆಲ ವಸ್ತುಗಳನ್ನು ಜಪ್ತಿ ಮಾಡಿದ್ದರು. ನಂತರ ಮನೆಯಲ್ಲಿ 4 ಗಂಟೆ ವಿಚಾರಣೆ ನಡೆಸಿದ ಪೊಲೀಸರು, ಹೆಚ್ಚಿನ ವಿಚಾರಣೆಗೆ ಸಿಸಿಬಿ ಕಚೇರಿಗೆ ಕರೆತಂದಿದ್ದರು.

sanjana case 2

ಸಂಜನಾ ಹೇಳಿಕೆ ಪಡೆದುಕೊಂಡ ನಂತರ ಬಂಧಿಸಿ ಎಂಟನೇ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಸಂಜನಾ ಅವರು ಡ್ರಗ್ಸ್ ಮಾಫಿಯಾದಲ್ಲಿ  ಭಾಗಿಯಾಗಿರುವ ಮಾಹಿತಿ ಇದ್ದು,  ಸಂಜನಾ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ.  ಅವರನ್ನು ಕಸ್ಟಡಿಗೆ ನೀಡಬೇಕು’ಎಂದು ಸಿಸಿಬಿ ಪೊಲೀಸರು ನ್ಯಾಯಾಧೀಶರಿಗೆ ಮನವಿ ಮಾಡಿದರು.

ಸಿಸಿಬಿ ಮನವಿಗೆ ಒಪ್ಪಿಗೆ ಸೂಚಿಸಿದ ನ್ಯಾಯಾಧೀಶರು, ಸಂಜನಾ ಅವರನ್ನು 5 ದಿನ ಸಿಸಿಬಿಯ ಕಸ್ಟಡಿಗೆ ನೀಡಿದರು. ಇದಕ್ಕೂ ಮೊದಲು  ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೊರೊನಾ  ಹಾಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

sanjana case 3

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top