ಡಿವಿಜಿ ಸುದ್ದಿ, ಬೆಂಗಳೂರು: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆಯಲ್ಲಿ ಕೆಲ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಮಾಜಿ ಸಚಿವ ರೋಶನ್ ಬೇಗ್ ಆರೋಪಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು,ಗೋರಿ ಪಾಳ್ಯ, ಕಲಾಸಿಪಾಳ್ಯ, ಟಿಪ್ಪು ನಗರದಿಂದ ಡಿಜೆ ಹಳ್ಳಿಗೆ ಯಾಕೆ ಬರಬೇಕಿತ್ತು? ಹೊರಗಿನವರು ಬಂದು ದಿಢೀರ್ ಗಲಾಟೆ ಮಾಡಿದರು ಎಂದು ಸ್ಥಳಿಯರೇ ಹೇಳುತ್ತಿದ್ದಾರೆ.
ಬಂಧಿಸಿದವರಲ್ಲಿ ಕೆಲವರು ಅಮಾಯಕರೂ ಇರಬಹುದು. ಅಂತಹವರನ್ನು ಬಿಡಿ. ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ಆಗಲೇಬೇಕು. ಜಮೀರ್ ಅಹ್ಮದ್ ಬಗ್ಗೆ ನಾನು ಜಾಸ್ತಿ ಮಾತಾಡಲ್ಲ. ನಾನು ವಿದ್ಯಾರ್ಥಿ ಹೋರಾಟದಿಂದ ಬಂದ ಸೀನಿಯರ್ ಲೀಡರ್. ಯಡಿಯೂರಪ್ಪನವರು ಸಿಎಂ ಆದರೆ ಜಮೀರ್ ವಾಚ್‍ಮನ್ ಕೆಲಸ ಮಾಡ್ತೀನಿ ಅಂದಿದ್ದ, ಮೊದಲು ಆ ಕೆಲಸ ಮಾಡಲಿ ಎಂದರು.



