ಡಿವಿಜಿ ಸುದ್ದಿ, ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ನಷ್ಟ ವಸೂಲಿಗೆ ಹೈಕೋರ್ಟ್ ಕ್ಲೇಮ್ ಕಮಿಷನರ್ ಆಗಿ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಅವರನ್ನು ನೇಮಕ ಮಾಡಿದೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಈ ಗಲಭೆಯಲ್ಲಿ ಭಾರಿ ಪ್ರಮಾಣದಲ್ಲಿ ಸಾರ್ವಜನಿಕ, ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಈ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲು ಸರ್ಕಾರ ತೀರ್ಮಾನಿಸಿದೆ.
Our Govt approached Hon'ble High Court to appoint Claims Commissioner to assess the damages caused to public & private properties during riots in KJ Halli & DJ Halli, Bengaluru. Today, Hon'ble HC appointed Justice HS Kempanna (Retd) as Claims Commissionerhttps://t.co/vKQPGEtdxK
— B.S.Yediyurappa (@BSYBJP) August 28, 2020
ಈ ಬಗ್ಗೆ ಸರ್ಕಾರ ನಷ್ಟ ವಸೂಲಿಗೆ ಕಮಿಷನರ್ ನೇಮಿಸುವಂತೆ ಮನವಿ ಮಾಡಿತ್ತು. ಪ್ರತಿಭಟನೆ ನಷ್ಟವನ್ನು ಗಲಭೆಕೋರರಿಂದಲೇ ಭರಿಸಲು ಈಗಾಗಲೇ ಸುಪ್ರೀಂ ಆದೇಶ ಇರುವ ಹಿನ್ನೆಲೆ, ಹೈಕೋರ್ಟ್ ಕ್ಲೇಮ್ ಕಮಿಷನರ್ ನೇಮಕ ಮಾಡಿದೆ.



