ಶುಭ ಸೋಮವಾರ-ಜೂನ್-01,2020 ರಾಶಿ ಭವಿಷ್ಯ
ಸೂರ್ಯೋದಯ: 05:56, ಸೂರ್ಯಸ್ತ: 18:39
ಶಾರ್ವರಿ ನಾಮ ಸಂವತ್ಸರ
ಜ್ಯೇಷ್ಠ ಮಾಸ,ಉತ್ತರಾಯಣ
ತಿಥಿ: ದಶಮೀ – 14:56 ವರೆಗೆ
ನಕ್ಷತ್ರ: ಹಸ್ತ – 25:03+ ವರೆಗೆ
ಯೋಗ: ಸಿದ್ಧಿ – 13:17 ವರೆಗೆ
ಕರಣ: ಗರಜ – 14:56 ವರೆಗೆ ವಣಿಜ – 25:31+ ವರೆಗೆ
ದುರ್ಮುಹೂರ್ತ: 12:43 – 13:33ದುರ್ಮುಹೂರ್ತ : 15:15 – 16:06
ವರ್ಜ್ಯಂ: 10:43 – 12:12
ರಾಹು ಕಾಲ: 07:30 – 09:00
ಯಮಗಂಡ: 10:30 – 12:00
ಗುಳಿಕ ಕಾಲ: 13:30 – 15:0
ಅಮೃತಕಾಲ: 19:32 – 21:00
ಅಭಿಜಿತ್ ಮುಹುರ್ತ: 11:52 – 12:43
ಓಂ “ಶ್ರೀ ಸಾಯಿ ಚಾಮುಂಡೇಶ್ವರಿ ದೇವಿಯ”
ತಮ್ಮ ಸಮಸ್ಯೆಗಳಾದ ಮದುವೆ, ಕುಟುಂಬ ಕಲಹ, ವ್ಯಾಪಾರದಲ್ಲಿ ನಷ್ಟ, ಪ್ರೇಮ ವಿವಾಹ , ಕುಟುಂಬದಲ್ಲಿ ಅಶಾಂತಿ , ಜೀವನದಲ್ಲಿ ಜಿಗುಪ್ಸೆ , ಜೀವನದಲ್ಲಿ ಪದೇ ಪದೇ ಸೋಲು ಕಾಣುವುದು , ಭಯ ಭೀತಿ ,ಶಿಕ್ಷಣ, ವಿದೇಶ ಪ್ರವಾಸ ಇನ್ನು ಹಲವಾರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ನಿಮ್ಮ ದಾಂಪತ್ಯ ಜೀವನ ಜ್ಯೋತಿಷ್ಯಶಾಸ್ತ್ರ ಪ್ರಕಾರ
ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಬಾಳಬೇಕಾದರೆ ಅವರ ಜನ್ಮ ಕುಂಡಲಿಯಲ್ಲಿ ಇರುವ ಗ್ರಹಗಳೇ ಕಾರಣ.
ನಿಮ್ಮ ಜನ್ಮ ಕುಂಡಲಿಯಲ್ಲಿ 2 ನೇ ಮನೆ, 7ನೇ ಮನೆ ಮತ್ತು 11ನೇ ಮನೆ ಪರೀಕ್ಷಿಸಬೇಕು. ಈ ಸ್ಥಾನದಲ್ಲಿ ಏನಾದರೂ ಶುಭಗ್ರಹಗಳಿದ್ದರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಚಂದ್ರ, ಬುಧ, ಗುರು ಮತ್ತು ಶುಕ್ರ ಗಳಿಂದ ಉತ್ತಮ ಫಲ ದೊರಕುವುದು.
ನಿಮ್ಮ ಕುಂಡಲಿಯಲ್ಲಿ 2 ನೇ ಮನೆ ,7 ನೇ ಮನೆ 11ನೇ ಮನೆ ಗ್ರಹಗಳೊಂದಿಗೆ ಶುಭಗ್ರಹಗಳಿದ್ದರೆ ತುಂಬಾ ಒಳ್ಳೆಯದು ಫಲ ನಿರೀಕ್ಷಣೆ ಮಾಡುವಿರಿ.
ನಿಮ್ಮ ಲಗ್ನ ಕುಂಡಲಿದಲ್ಲಿ ಈ ಕೆಳಗಿನಂತೆ ಲಕ್ಷಣಗಳು ಕಂಡರೆ,
7ನೇ ಮನೆಯಲ್ಲಿ ಚಂದ್ರ ಇದ್ದರೆ, ದಾಂಪತ್ಯ ಜೀವನ ತೃಪ್ತಿ ದಾಯಕ.
7ನೇ ಮನೆಯಲ್ಲಿ ಬುಧ ಇದ್ದರೆ ದಾಂಪತ್ಯ ಜೀವನ ಸುಖಮಯ.
7ನೇ ಮನೆಯಲ್ಲಿ ಗುರು ಇದ್ದರೆ ಒಳ್ಳೆಯ ನಡತೆ ಹೆಂಡತಿ ಸಿಗುತ್ತಾಳೆ.
ಸೋಮಶೇಖರ್B.Sc
Mob.no.93534 88403
ಮೇಷ ರಾಶಿ
ಎಷ್ಟೇ ಪ್ರಯತ್ನಪಟ್ಟರೂ ಗುರಿಮುಟ್ಟಲು ಅಸಾಧ್ಯವಾದ ಪ್ರಸಂಗ ಕಾಡುತ್ತಿದೆ. ಪುನಃ ಪ್ರಯತ್ನಿಸಿ. ನಿಮ್ಮ ಜೊತೆ ಮೋಜು ಮಸ್ತಿ ಮಾಡಿದವರು ಕಷ್ಟಕ್ಕೆ ಹಣ ಕೇಳಿದರೆ ದೂರ ಸರಿಯುತ್ತಾರೆ ಅವರ ಬಗ್ಗೆ ಎಚ್ಚರವಹಿಸಿ. ಆತ್ಮಸಾಕ್ಷಿ ತಕ್ಕಂತೆ ಕೆಲಸ ಮಾಡಿ ಲಾಭವಾಗಲಿದೆ. ನಿಮ್ಮ ಯೋಜನೆಗಳು ಪತ್ನಿಯ ಹತ್ತಿರ ಚರ್ಚಿಸಿ ಮುಂದೆ ಪಾದಾರ್ಪಣೆ ಮಾಡಿ. ಮಕ್ಕಳಿಂದ ಮನಸ್ತಾಪ. ಬಂಧು ಬಾಂಧವರೊಡನೆ ವಿಶ್ವಾಸದಿಂದ ವರ್ತಿಸುವುದು ಒಳ್ಳೆಯದು. ಬಂಡವಾಳ ಹೂಡಿದ ವ್ಯಾಪಾರಸ್ಥರು ಹಿನ್ನಡೆಯಾದರೂ ನಷ್ಟವಿಲ್ಲ, ಮುಂದಿನ ದಿನದಲ್ಲಿ ಲಾಭದಾಯಕವಾಗಲಿದೆ ಪ್ರಯತ್ನಿಸಿ. ಪ್ರೇಮಿಗಳ ಮಧ್ಯೆ ವಿರಸ.
ಸೋಮಶೇಖರ್B.Sc
Mob.no.93534 88403
ವೃಷಭ ರಾಶಿ
ನಿಮ್ಮ ಯೋಜಿತ ಕೆಲಸಗಳು ಫಲದಾಯಕವಾಗಿ ಸಿದ್ಧಿ ಆಗಲಿದೆ.ನಿಮ್ಮ ಪರಿಶ್ರಮಕ್ಕೆ ಉತ್ತಮ ಬೆಲೆ ದೊರಕುವ ದಿನ. ಯೋಜನೆಗಳಲ್ಲಿನ ಅಡ್ಡಿ-ಆತಂಕಗಳು ದೂರವಾಗಲಿದೆ. ಕೆಲವರು ಮಾಡುವ ಆರೋಪಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಗಳಿಸುವಿರಿ. ಭವಿಷ್ಯದ ಆಲೋಚನೆ ಸರಿಯಾದ ಪ್ರಮಾಣದಲ್ಲಿ ನಡೆಯುವುದು ಉತ್ತಮ.
ಸೋಮಶೇಖರ್B.Sc
Mob.no.93534 88403
ಮಿಥುನ ರಾಶಿ
ಅವಿವಾಹಿತರಿಗೆ ಕಂಕಣಬಲ ಕೂಡಿ ಬರುವ ಸಾಧ್ಯತೆಗಳು ಕಾಣಬಹುದು. ಲಾಭದಾಯಕ ಯೋಜನೆಗಳನ್ನು ಪಡೆದುಕೊಳ್ಳುವಿರಿ. ಈ ದಿನ ನಿಮ್ಮ ಪ್ರತಿಭೆಗೆ ಉತ್ತಮ ವೇದಿಕೆ ಸಿಗಲಿದೆ. ಅಧಿಕ ಕೆಲಸದ ಒತ್ತಡದಿಂದ ಆಯಾಸ ಹೆಚ್ಚಾಗಲಿದೆ. ನಿಮ್ಮಲ್ಲಿ ಮೂಡುವ ಕೀಳರಿಮೆಯ ಭಾವನೆಯನ್ನು ಬಿಡುವುದು ಲೇಸು. ಶಿಕ್ಷಣದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.
ಸೋಮಶೇಖರ್B.Sc
Mob.no.93534 88403
ಕರ್ಕಾಟಕ ರಾಶಿ
ಅನಿರೀಕ್ಷಿತ ಪ್ರವಾಸ ಈ ದಿನ ಕೈಗೊಳ್ಳುವ ಸಾಧ್ಯತೆ ಕಾಣಬಹುದು. ಹೊಸ ಜನರ ಹಾಗೂ ಉತ್ತಮ ಒಡನಾಟ ಬೆಳೆಯಲಿದೆ. ಬಾಕಿ ಕೆಲಸಗಳನ್ನು ಈ ದಿನ ಪೂರ್ಣಗೊಳಿಸುವಿರಿ. ನಿಮ್ಮಲ್ಲಿ ಮೂಡುವ ಕೋಪವನ್ನು ಆದಷ್ಟು ತಡೆಯುವುದು ಸೂಕ್ತ. ಕೆಲಸದಲ್ಲಿ ತಪ್ಪಾಗದಂತೆ ಕಾರ್ಯನಿರ್ವಹಿಸಿ. ವಿರೋಧಿಗಳು ನಿಮ್ಮ ಗುರಿ ದಾರಿತಪ್ಪಿಸುವ ಯೋಜನೆ ಹೊಂದಿರಬಹುದು ಎಚ್ಚರವಿರಲಿ.
ಸೋಮಶೇಖರ್B.Sc
Mob.no.93534 88403
ಸಿಂಹ ರಾಶಿ
ಶ್ರಮದಾಯಕ ಕೆಲಸಗಳಿಂದ ಉತ್ತಮ ಪ್ರಗತಿ ಹಾಗೂ ಪ್ರತಿಫಲ ಕಾಣಬಹುದು. ಕುಲದೇವತಾ ಆರಾಧನೆಗೆ ನಿಮ್ಮ ಮನಸ್ಸು ಮೂಡಲಿದೆ. ನಿಮ್ಮಲ್ಲಿ ಮನೆಮಾಡಿರುವ ಭಯಗ್ರಸ್ಥ ವಾತಾವರಣವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಕುಟುಂಬದಲ್ಲಿ ನಿಮ್ಮ ವರ್ತನೆ ಸಂಯಮದಿಂದ ಇರುವುದು ಒಳ್ಳೆಯದು. ಈ ದಿನ ಚೈತನ್ಯ ಹಾಗೂ ಉತ್ಸಾಹ ತುಂಬಿಕೊಂಡು ಕಾರ್ಯಗತವಾಗುವುದು ಮುಖ್ಯ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ.
ಸೋಮಶೇಖರ್B.Sc
Mob.no.93534 88403
ಕನ್ಯಾ ರಾಶಿ
ಅಂದುಕೊಂಡಿರುವ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಸುವಿರಿ. ಈ ದಿನ ನಿಮ್ಮಿಂದ ಮಹತ್ವದ ನಿರ್ಧಾರಗಳು ಪ್ರಕಟಣೆ ಗೊಳ್ಳಲಿದೆ ಆದಷ್ಟು ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಸಾಮಾಜಿಕ ಕಾರ್ಯಗಳಿಂದ ಉತ್ತಮ ಗೌರವ ಸಂಪಾದಿಸುವಿರಿ. ಕುಟುಂಬಸ್ಥರೊಂದಿಗೆ ಪ್ರವಾಸ ಮಾಡುವ ಯೋಜನೆ ರೂಪಿಸುತ್ತೀರಿ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು ಎಚ್ಚರವಿರಲಿ.
ಸೋಮಶೇಖರ್B.Sc
Mob.no.93534 88403
ತುಲಾ ರಾಶಿ
ಬಯಸಿದ್ದು ಸಿಕ್ಕಿಲ್ಲ ಎಂಬ ಭಾವನೆಯಿಂದ ಕೂರಬೇಡಿ ಇನ್ನಷ್ಟು ಶ್ರಮಪಟ್ಟರೆ ಖಂಡಿತಾ ಸಿಗಲಿದೆ. ಅವಸರದಿಂದ ಕೆಲವು ಯೋಜನೆಗಳನ್ನು ಕಳೆದುಕೊಳ್ಳಬಹುದು ಎಚ್ಚರವಿರಲಿ. ವ್ಯವಹಾರದಲ್ಲಿ ಉತ್ತಮ ನಿರೂಪಣೆ ಇರುವುದು ಸೂಕ್ತ. ನಿಮ್ಮ ಆರೋಗ್ಯದ ಬಗ್ಗೆ ಆದಷ್ಟು ಗಮನ ವಹಿಸುವುದು ಒಳ್ಳೆಯದು. ವಿಚಾರಗಳನ್ನು ಸಂಪೂರ್ಣ ತಿಳಿದುಕೊಂಡು ಮುಂದೆ ಸಾಗುವುದು ಕ್ಷೇಮ. ಚಂಚಲ ಸ್ವಭಾವ ನಿಮಗೆ ನಷ್ಟ ತರಬಹುದು ಆದಷ್ಟು ಇದನ್ನು ಬಿಡ ತಕ್ಕದ್ದು. ಹಣಕಾಸಿನ ವಿಷಯದಲ್ಲಿ ಉತ್ತಮ ಮಟ್ಟದ ಲಾಭ ಫಲಿತಾಂಶ ಕಂಡುಬರಲಿದೆ.
ಮಾಹಿತಿಗಾಗಿ ಕರೆ ಮಾಡಿ.
ಸೋಮಶೇಖರ್B.Sc
Mob.no.93534 88403
ವೃಶ್ಚಿಕ ರಾಶಿ
ಕೆಲಸಗಳನ್ನು ಸರಳ ಪಡಿಸಿಕೊಳ್ಳಲು ಪ್ರಯತ್ನಿಸಿ. ತಾತ್ಕಾಲಿಕವಾಗಿ ಹಣಕಾಸಿನಲ್ಲಿ ಗೆಲುವು ಲಭ್ಯವಾಗಬಹುದು, ಪೂರ್ಣ ಪ್ರಮಾಣದ ಯೋಜನೆಗಳನ್ನು ವಿಸ್ತರಣೆ ಗೊಳಿಸಬೇಕಾದ ಅನಿವಾರ್ಯತೆ ಇದೆ. ಕುಟುಂಬದಲ್ಲಿ ಸಂತಸದ ಸುದ್ದಿ ಕೇಳುವಿರಿ. ಹೊಸ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಬರಲಿದೆ. ನವೀನ ಉದ್ಯಮಕ್ಕೆ ಚಾಲನೆ ದೊರೆಯಲಿದೆ.
ಸೋಮಶೇಖರ್B.Sc
Mob.no.93534 88403
ಧನಸ್ಸು ರಾಶಿ
ಪ್ರಗತಿದಾಯಕ ಯೋಜನೆಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ನಿಮ್ಮ ಉತ್ಸಾಹ ಹಾಗೂ ಮಾತುಗಾರಿಕೆಯಿಂದ ಎಲ್ಲರ ಮನವನ್ನು ಗೆಲ್ಲಲಿದ್ದೀರಿ. ಆರ್ಥಿಕ ದುಂದು ವೆಚ್ಚದಿಂದ ಸಮಸ್ಯೆ ಅನುಭವಿಸಬಹುದು. ಆತ್ಮೀಯರಿಂದ ಗೌರವ ಪ್ರಾಪ್ತಿಯಾಗಲಿದೆ. ಭೂ ಸಂಬಂಧಿತ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಕಂಡುಬರುತ್ತದೆ.
ಸೋಮಶೇಖರ್B.Sc
Mob.no.93534 88403
ಮಕರ ರಾಶಿ
ನಿಮ್ಮಲ್ಲಿರುವ ಆಲಸ್ಯತನವನ್ನು ತೆಗೆದುಹಾಕುವುದು ಒಳಿತು. ನಿಮ್ಮ ಮುಖ್ಯ ಕೆಲಸಕ್ಕಾಗಿ ಹಣ ಹೊಂದಾಣಿಕೆ ಮಾಡಲು ಬಹಳಷ್ಟು ಪ್ರಯತ್ನ ಪಡುವಿರಿ. ನಿಮ್ಮ ಮನದಲ್ಲಿನ ಸಂಕಲ್ಪಗಳನ್ನು ಈಡೇರಿಸಲು ಸಿದ್ಧರಾಗಿ. ನಿಮ್ಮ ಸತ್ಯ ಹಾಗೂ ಪ್ರಾಮಾಣಿಕ ಗುಣಧರ್ಮದಿಂದ ಮನಸ್ಸಿನ ಆಕಾಂಕ್ಷೆಗಳು ಈಡೇರಲಿದೆ.
ಸೋಮಶೇಖರ್B.Sc
Mob.no.93534 88403
ಕುಂಭ ರಾಶಿ
ಬಂಧು-ಮಿತ್ರರಿಂದ ನಿಮ್ಮ ಯೋಜನೆಗಳಿಗೆ ಸಹಕಾರ ದೊರೆಯಲಿದೆ. ನಿಮ್ಮ ಸ್ಪಷ್ಟ ನಿಲುವು ಹಾಗೂ ಮನದ ಸಂಕಲ್ಪಗಳು ಯೋಜನೆಗೆ ಬೆಂಬಲವಾಗಿ ಕಾಣಬಹುದು. ಧೈರ್ಯಂ ಸರ್ವತ್ರ ಸಾಧನಂ ಎಂಬುದನ್ನು ಮರೆಯಬೇಡಿ. ಕುಟುಂಬದಲ್ಲಿ ಸಂತಸದಾಯಕ ವಾತಾವರಣ ಇರಲಿದೆ ಹಾಗೂ ಸಂಗಾತಿಯೊಂದಿಗೆ ಉತ್ತಮ ಕಾಲಕಳೆಯುವಿರಿ. ಮಕ್ಕಳ ಬೆಳವಣಿಗೆ ಹರ್ಷದಾಯಕ ವಾಗಿರಲಿದೆ.
ಸೋಮಶೇಖರ್B.Sc
Mob.no.93534 88403
ಮೀನ ರಾಶಿ
ಹೊಸ ಉದ್ಯಮ ಪ್ರಾರಂಭಕ್ಕೆ ಪ್ರಯತ್ನ ಮಾಡುವಿರಿ. ಅವಕಾಶಗಳು ಹೆಚ್ಚಳವಾಗಲಿದೆ. ನಿಮ್ಮಲ್ಲಿ ಇರುವ ವೈಯಕ್ತಿಕ ಸಮಸ್ಯೆಗಳು ದೂರವಾಗುವುದು ನಿಶ್ಚಿತ. ಬಹುದಿನದ ಬೇಡಿಕೆಗಳು ಈಡೇರಲಿದೆ. ಕುಟುಂಬದ ಹಿತಾಸಕ್ತಿ ನೀವು ಕಡೆಗಣಿಸುವುದು ಬೇಡ. ಶುಭಕಾರ್ಯ ನೆರವೇರಲು ನಿಮ್ಮ ಮುಂದಾಳತ್ವ ಅವಶ್ಯಕವಿದೆ. ಬಂಧುಮಿತ್ರರೊಡನೆ ಆದಷ್ಟು ವಿಶ್ವಾಸ ಕಾಯ್ದುಕೊಳ್ಳಿ. ವಾಹನ ಖರೀದಿಗೆ ಅವಕಾಶ ಕೂಡಿ ಬರಲಿದೆ.
ಸೋಮಶೇಖರ್B.Sc
Mob.no.93534 88403