Connect with us

Dvgsuddi Kannada | online news portal | Kannada news online

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಶನಿವಾರ-ಮೇ-16,2020 ರಾಶಿ ಭವಿಷ್ಯ

ಸೂರ್ಯೋದಯ: 05:57, ಸೂರ್ಯಸ್ತ: 18:34

ಶಾರ್ವರಿ ನಾಮ ಸಂವತ್ಸರ
ವೈಶಾಖ ಮಾಸ ,ಉತ್ತರಾಯಣ
ತಿಥಿ: ನವಮೀ – 10:22 ವರೆಗೆ
ನಕ್ಷತ್ರ: ಶತಭಿಷ – 11:05 ವರೆಗೆ
ಯೋಗ: ವೈಧೃತಿ – 26:36+ ವರೆಗೆ
ಕರಣ: ಗರಜ – 10:22 ವರೆಗೆ ವಣಿಜ – 23:30 ವರೆಗೆ

ದುರ್ಮುಹೂರ್ತ: 05:57 – 06:48ದುರ್ಮುಹೂರ್ತ : 06:48 – 07:38

ರಾಹು ಕಾಲ: 09:00 – 10:30
ಯಮಗಂಡ: 13:30- 15:30
ಗುಳಿಕ ಕಾಲ: 06:00 _07:30

ಅಮೃತಕಾಲ: 29:01+ – 30:48+
ಅಭಿಜಿತ್ ಮುಹುರ್ತ: 11:50 – 12:41

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ ರಾಶಿ:
ನಿಮ್ಮ ಕೆಲಸದ ಮೇಲೆ ಗಮನ ಹರಿಸಿ ಮತ್ತು ಭಾವನಾತ್ಮಕ ವ್ಯಾಜ್ಯಗಳಿಂದ ದೂರವಿರಿ. ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ.
ಇಂದು, ನೀವು ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಜೀವನದ ಅತ್ಯುತ್ತಮ ಸಂಜೆಯನ್ನು ಕಳೆಯುತ್ತೀರಿ.
ಆರೋಗ್ಯದಲ್ಲಿ ಉತ್ತಮ.
ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಯಾವುದಾದರೂ ಸಾಮಾಜಿಕ ಸಭೆಗೆ ಹಾಜರಾಗಿ. ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು. ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಿಗೆ ಕೆಲಸ ಮಾಡಲು ಹಣ ಕೇಳಬಹುದು. ಕುಟುಂಬದಲ್ಲಿ ತೊಂದರೆಯುಂಟಾಗಬಹುದು.
ಸೋಮಶೇಖರ್B.Sc
Mob.93534 88403

ವೃಷಭ ರಾಶಿ:
ಫಿಟ್ ನೆಸ್ ಮತ್ತು ತೂಕ ನಷ್ಟ ಕಾರ್ಯಕ್ರಮಗಳು ನೀವು ಒಳ್ಳೆಯದೇಹರಚನೆ ಹೊಂದಲು ಸಹಾಯ ಮಾಡುತ್ತದೆ. ನೀವು ನಿಮ್ಮನ್ನು ಒಂದು ರೋಮಾಂಚಕಾರಿ ಪರಿಸ್ಥಿತಿಯಲ್ಲಿ ಕಂಡುಕೊಳ್ಳಬಹುದು-ಇದು ನಿಮಗೆ ಆರ್ಥಿಕ ಲಾಭವನ್ನೂ ತರುತ್ತದೆ.
ನೀವು ಮೂಡ್ ಆಫ್ ಆಗಿರುವುದರಿಂದ ನಿಮ್ಮ ಸಂಗಾತಿಯ ಮೆಲೆ ಸಿಟ್ಟಾಗಬಹುದು.
ಆರೋಗ್ಯಕ್ಕೆ ತೊಂದರೆ ಇಲ್ಲ.
ಇಂದು ನೀವು ಯಾವುದೇ ಸಮಸ್ಯೆಯಿಲ್ಲದೆ ವಿಷಯಗಳನ್ನು ನಿಭಾಯಿಸಲು ಮತ್ತು ಇಂದು ವಿಜೇತರಾಗಿ ಹೊರಹೊಮ್ಮಲುಸಾಧ್ಯವಾಗುತ್ತದೆ. ನೀವು ಅತುರದ ನಿರ್ಣಯಗಳನ್ನು ಕೈಗೊಂಡರೆ ಮತ್ತು ಅನಗತ್ಯ ಕ್ರಮಗಳನ್ನು ಕೈಗೊಂಡರೆ ಈ ದಿನ ನಿಮ್ಮನ್ನು ನಿರಾಸೆಗೊಳಿಸುತ್ತದೆ. ನೀವು ಮೂಡ್ ಆಫ್ ಆಗಿರುವುದರಿಂದ.
ಸೋಮಶೇಖರ್B.Sc
Mob.93534 88403

ಮಿಥುನ ರಾಶಿ:
ವಿತ್ತೀಯ ದೃಷ್ಟಿಯಿಂದ, ಇಂದು ನಿಮಗೆ ಶುಭ ದಿನವಾಗಿದೆ. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಕೆಲವು ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ ಮತ್ತು ಕೆಲವು ಸ್ನೇಹಿತರು ನಿಮಗೆ ಕೆಲವು ಲಾಭದಾಯಕ ಯೋಜನೆಗಳನ್ನು ತೋರಿಸುತ್ತಾರೆ.
ನೀವು ಇಂದು ತುಂಬಾ ಶಕ್ತಿಯುತವಾಗಿರಬಹುದು. ನಿಮ್ಮ ಮನಸ್ಥಿತಿ ಕೂಡ ತುಂಬಾ ಚೆನ್ನಾಗಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ತೊಂದರೆಗಳು ಕಾಡುವುದಿಲ್ಲ. ಆರೋಗ್ಯಕರ ಮನಸ್ಸಿಗೆ ಸಕಾರಾತ್ಮಕವಾಗಿ ಯೋಚಿಸಿ.
ಇಂದು ನೀವು ಪ್ರೀತಿಯ ಗುರುವಿನ ಪಾತ್ರವನ್ನು ವಹಿಸಬಹುದು, ಅಲ್ಲಿ ನೀವು ನಿಮ್ಮ ಸಂಗಾತಿಯಲ್ಲಿ ಉತ್ಸಾಹವನ್ನು ವಿಭಿನ್ನವಾಗಿ ಬೆಳಗಿಸಲು ಬಯಸುತ್ತೀರಿ.
ಸೋಮಶೇಖರ್B.Sc
Mob.93534 88403

ಕರ್ಕಾಟಕ ರಾಶಿ :
ನಿಮ್ಮ ಪ್ರೀತಿಪಾತ್ರರನ್ನು ಪೋಷಿಸುವ ಮತ್ತು ನಿಮ್ಮ ಪ್ರೀತಿಯನ್ನು ಸೃಜನಶೀಲ ರೀತಿಯಲ್ಲಿ ವ್ಯಕ್ತಪಡಿಸುವ ಸಾಧ್ಯತೆಯಿದೆ ಮತ್ತು ಫಲಿತಾಂಶಗಳು ಉತ್ತೇಜನಕಾರಿಯಾಗುತ್ತವೆ.
ನೀವು ಉದ್ಯೋಗ ಅಕಾಂಕ್ಷಿಗಳಾಗಿದ್ದರೆ ಇಂದು ನಿಮಗೆ ಒಳ್ಳೆಯ ಶುಭ ಸುದ್ದಿ ಕಾದಿದೆ. ನಿಮ್ಮ ಹಿರಿಯರ ಮಾತುಗಳನ್ನು ಕೇಳಿ ಅವರು ಕೊಡುವ ಸಲಹೆಗಳನ್ನು ಪಾಲಿಸಿ. ನಿಮ್ಮ ಯಶಸ್ಸಿಗೆ ಹಿರಿಯರ ಮಾರ್ಗದಶನ ಬೇಕಾಗಬಹುದು. ಅದೃಷ್ಟದ ದಿನಕ್ಕಾಗಿ ಹರಾಜು ಬಿಡ್‌ಗಳನ್ನು ಮತ್ತು ಮೊಹರು ಮಾಡಿದ ಟೆಂಡರ್‌ಗಳನ್ನು ಮುಂದೂಡಿ. ನಿಮ್ಮ ಅದೃಷ್ಟವನ್ನು ತಿರುಗಿಸಲು ನೀವು ಏನೇ ಮಾಡಿದರೂ, ಎಲ್ಲಾ ವಿಷಯಗಳಲ್ಲಿ ಹೇರಳವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಸೋಮಶೇಖರ್B.Sc
Mob.93534 88403

ಸಿಂಹರಾಶಿ:
ನಿಮ್ಮ ನಡೆ-ನುಡಿ ಮತ್ತು ಮಾತಿನ ಜಾಣ್ಮೆಯಿಂದ ಜನರ ಮನಸ್ಸನ್ನು ಗೆಲ್ಲುವಿರಿ. ನಿಮ್ಮ ಕ್ರಿಯಾಶೀಲತೆಯೇ ನಿಮ್ಮ ಪಾಲಿಗೆ ಶ್ರೀರಕ್ಷೆ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು.
ಸಾಲ ನೀಡಲು ಇಲ್ಲವೆ ಸಾಲ ತೆಗೆದುಕೊಳ್ಳಲು ಮುಂದಾಗದಿರಿ. ಪರಾಕ್ರಮ ರಾಹು ನಿಮ್ಮ ಆತ್ಮಸ್ಥೈರ್ಯವನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಕೆಮ್ಮು, ಕಫದಂತಹ ತೊಂದರೆಗಳು ಬರುವವು. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
ಸೋಮಶೇಖರ್B.Sc
Mob.93534 88403

ಕನ್ಯಾ ರಾಶಿ:
ಪ್ರೇಮ ಕುರುಡು. ಅದಕ್ಕೆ ಹೊರಗಿನ ರೀತಿ ರಿವಾಜುಗಳ ಗೊಡವೆಯೇ ಇರದು. ತಾನು ಅಂದುಕೊಂಡದ್ದೆ ಸತ್ಯ ಎಂದು ತಿಳಿದು ಮುಂದುವರೆಯುವುದರಿಂದ ತೊಂದರೆ ಎದುರಿಸಬೇಕಾಗುವುದು. ಕೆಲವರಿಗೆ ಕಂಕಣಭಾಗ್ಯ ಕೂಡಿ ಬರುವುದು.
ಒಳ್ಳೆಯ ರೀತಿಯಲ್ಲಿ ಲಾಭಕ್ಕೆ ದಾರಿ ಆಗಬಹುದಾದ ವಹಿವಾಟುಗಳನ್ನು ನೀವು ಹೆಚ್ಚಿನ ಎಚ್ಚರದಿಂದಲೇ ನಡೆಸಿ. ಆಸ್ತಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಅನುಕೂಲವಾಗುವುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು
ಸೋಮಶೇಖರ್B.Sc
Mob.93534 88403

ತುಲಾ ರಾಶಿ:
ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅವರನ್ನು ಚಿಕ್ಕಮಕ್ಕಳಂತೆ ದಂಡಿಸಿದರೆ ಅವರು ನಿಮ್ಮ ವಿರುದ್ಧ ತಿರುಗಿ ಬೀಳುವರು. ಮನೆಯ ಸದಸ್ಯರ ವಿಶ್ವಾಸವನ್ನು ಪಡೆಯಿರಿ.
ಭೂಮಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಧ್ಯವರ್ತಿತನ ಹಾಗೂ ಮಾರಾಟದ ವ್ಯವಹಾರಗಳಲ್ಲಿ ವಿಶೇಷವಾದ ಎಚ್ಚರಿಕೆ ಇರಲಿ. ಸೂಕ್ತವಾದ ದಾಖಲೆಗಳೊಂದಿಗೆ ವ್ಯವಹರಿಸುವುದು ಉತ್ತಮ. ಈ ಸಂಬಂಧ ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಪಡೆಯಿರಿ.
ಸೋಮಶೇಖರ್B.Sc
Mob.93534 88403

ವೃಶ್ಚಿಕ ರಾಶಿ:
ಸಿನಿಮಾಗೆ ಸಂಬಂಧಿಸಿದ, ವಜ್ರಾಭರಣ ವ್ಯಾಪಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ನಿರ್ಲಕ್ಷ ತೋರಿಸುವುದು ಸೂಕ್ತವಲ್ಲ. ಅಂತೆಯೆ ಕಟ್ಟಡ ಕೆಲಸಗಾರರು, ತಾಂತ್ರಿಕರು ಎಚ್ಚರಿಕೆಯಿಂದ ಕೆಲಸ ತೆಗೆದುಕೊಳ್ಳಿ. ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವ ಸಂದರ್ಭ ಇರುತ್ತದೆ.
ದುಷ್ಮನ್‌ ಕಹಾ ಹೇ ಅಂದರೆ ಬಗಲ್‌ ಮೆ ಹೇ ಎನ್ನುವಂತೆ ದೂರದ ಶತ್ರುಗಳಿಂದ ನಿಮಗೆ ತೊಂದರೆ ಇಲ್ಲ. ಹತ್ತಿರದವರೇ ನಿಮ್ಮ ಬೆನ್ನಿಗೆ ಚೂರಿ ಹಾಕುವ ಸಂದರ್ಭ ಇದೆ. ಆದಷ್ಟು ಅಪರಿಚಿತರಿಂದ ದೂರವಿರಿ. ಪ್ರತಿ ಹಣಕಾಸಿನ ವ್ಯವಹಾರಕ್ಕೆ ಲೆಕ್ಕ ಪಕ್ಕಾ ಇಡಿ.
ಸೋಮಶೇಖರ್B.Sc
Mob.93534 88403

ಧನಸು ರಾಶಿ:
ನೆರೆಹೊರೆಯ ಜನರ ಜತೆ ಎಷ್ಟೇ ಸೌಹಾರ್ದತೆಯಿಂದ ಇದ್ದರೂ ಅವರು ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಜಗಳ ತೆಗೆಯುವ ಸಾಧ್ಯತೆ ಇರುತ್ತದೆ. ಸದ್ಯದ ಗ್ರಹಸ್ಥಿತಿ ಸರಿ ಇಲ್ಲದ ಕಾರಣ ಕೆಲವನ್ನು ಕಂಡರೂ ಕಾಣದಂತೆ ಇರಬೇಕಾಗುವುದು. .
ಭಗವಂತನ ಒಲುಮೆ ಇದ್ದರೆ ಸಾಕು ಬೇರೆ ಯಾರ ಹಂಗೂ ಬೇಡ. ಅಂತೆಯೆ ನಿಮ್ಮ ಕಠಿಣ ತಪಸ್ಸಿಗೆ, ಪರಿಶ್ರಮಕ್ಕೆ ತಕ್ಕಂತೆ ವ್ಯಾಪಾರ ವ್ಯವಹಾರದಲ್ಲಿ ಆಶಾದಾಯಕ ಬೆಳವಣಿಗೆ ಕಂಡು ಬರುವುದು. ಅದನ್ನು ಪೂರ್ಣ ಪ್ರಮಾಣವಾಗಿ ಬಳಸಿಕೊಳ್ಳಿ.
ಸೋಮಶೇಖರ್B.Sc
Mob.93534 88403

ಮಕರ ರಾಶಿ:
ಪ್ರವಾಸದಿಂದ ಮನಸ್ಸು ಪ್ರಫುಲ್ಲವಾಗುವುದು. ಸಹೋದರನ ಮನೆಯಲ್ಲಿ ಸಂಭ್ರಮದ ವಾತಾವರಣದಲ್ಲಿ ಭಾಗವಹಿಸಿ. ಮಾತಾಪಿತರೊಂದಿಗೆ ಸ್ನೇಹದಿಂದ ವರ್ತಿಸಿ. ಅವರ ಕೃಪಾಶೀರ್ವಾದವನ್ನು ಪಡೆಯಿರಿ.
ವಿಶಿಷ್ಟವಾದ ಮತ್ತು ನಿಗೂಢವಾದ ಅನುಭವವೊಂದು ನಿಮ್ಮ ಪಾಲಿಗೆ ಲಭ್ಯವಾಗಲಿದೆ. ಅದರಿಂದ ಅಧ್ಯಾತ್ಮದ ಹರಿವು ಹೆಚ್ಚಾಗುವುದು.
ಸೋಮಶೇಖರ್B.Sc
Mob.93534 88403

ಕುಂಭ ರಾಶಿ:
ಆರ್ಥಿಕ ಅಭಿವೃದ್ಧಿ, ಚಂಚಲ ಮನಸ್ಸು, ಅಧಿಕ ತಿರುಗಾಟ, ಹೇಳಿಕೊಳ್ಳಲಾಗದ ಸಂಕಟ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ, ಶತ್ರುಗಳ ಬಾಧೆ ಕಾಡಬಹುದು‌.
ಯಂತ್ರೋಪಕರಣಗಳ ಖರೀದಿ, ಪ್ರವಾಸ ಹೋಗುವ ಸಾಧ್ಯತೆ, ಸ್ಥಿರಾಸ್ತಿ ಸಂಪಾದನೆ, ಮಿತ್ರರಿಂದ ವಂಚನೆ, ಕೈ ಹಾಕಿದ ಕೆಲಸದಲ್ಲಿ ವಿಘ್ನ,ಪುಣ್ಯಕ್ಷೇತ್ರ ದರ್ಶನ ಮಾಡಿ ಬನ್ನಿ‌.
ಉದ್ಯೋಗದಲ್ಲಿ ಪ್ರಗತಿ, ಆತ್ಮೀಯರಿಂದ ಸಹಾಯ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಲಾಭ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ,ಅಮೂಲ್ಯ ವಸ್ತುಗಳ ಖರೀದಿ, ಬಾಕಿ ಹಣ ವಸೂಲಿ ಮಾಡಲು ಒಳ್ಳೆಯ ಸಮಯ.
ಸೋಮಶೇಖರ್B.Sc
Mob.93534 88403

ಮೀನ ರಾಶಿ:
ಸಣ್ಣ ವಿಚಾರಗಳಲ್ಲಿ ಕಲಹ, ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಧನ ಲಾಭ, ಮಾನಸಿಕ ನೆಮ್ಮದಿ, ಇಲ್ಲ ಸಲ್ಲದ ಅಪವಾದ-ನಿಂದನೆ, ಋಣ ಬಾಧೆ, ವಾಹನ ಯೋಗ ಇದೆ.
ಈ ವಾರ ತಾಳ್ಮೆ ಅತ್ಯಗತ್ಯ, ಪರರಿಂದ ತೊಂದರೆ, ಆರೋಗ್ಯದಲ್ಲಿ ಸಮಸ್ಯೆ, ಅಪರಿಚಿತರ ವಿಚಾರದಲ್ಲಿ ಎಚ್ಚರ, ಅಪವಾದದಿಂದ ಮುಕ್ತರಾಗುವಿರಿ, ಈ ವಾರ ಶುಭ ಫಲ ಪ್ರಾಪ್ತಿ ಆಗಲಿದೆ.
ಕೆಲಸ ಕಾರ್ಯಗಳಲ್ಲಿ ಜಯ, ನಿಮ್ಮ ಶ್ರಮಕ್ಕೆ ತಕ್ಕ ಫಲ, ಎಷ್ಟೇ ಒತ್ತಡವಿದ್ದರೂ ತಾಳ್ಮೆ ಅತ್ಯಗತ್ಯ, ವ್ಯಾಪಾರದಲ್ಲಿ ಲಾಭ.
ಸೋಮಶೇಖರ್B.Sc
Mob.93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top