Connect with us

Dvgsuddi Kannada | online news portal | Kannada news online

ದಿನ ಭವಿಷ್ಯ

ಪ್ರಮುಖ ಸುದ್ದಿ

ದಿನ ಭವಿಷ್ಯ

ಶುಭ ಸೋಮವಾರ-ಮೇ-11,2020 ರಾಶಿ ಭವಿಷ್ಯ

ಸೂರ್ಯೋದಯ: 05:58, ಸೂರ್ಯಸ್ತ: 18:33
ಶಾರ್ವರಿ ನಾಮ ಸಂವತ್ಸರ
ವೈಶಾಖ ಮಾಸ, ಉತ್ತರಾಯಣ
ತಿಥಿ: ಚೌತಿ – 06:34 ವರೆಗೆ ಬಿಟ್ಟುಹೋದ ತಿಥಿ : ಪಂಚಮೀ – 29:52+ ವರೆಗೆ
ನಕ್ಷತ್ರ: ಪೂರ್ವ ಆಷಾಢ – 28:10+ ವರೆಗೆ

ಯೋಗ: ಸಾಧ್ಯ – 26:42+ ವರೆಗೆ
ಕರಣ: ಬಾಲವ – 06:34 ವರೆಗೆ

ದುರ್ಮುಹೂರ್ತ: 12:30 – 13:30ದುರ್ಮುಹೂರ್ತ : 15:00- 16:00

ರಾಹು ಕಾಲ: 07:30 – 09:00
ಯಮಗಂಡ: 10:30 – 12:00
ಗುಳಿಕ ಕಾಲ: 13:30 – 15:00

ಅಮೃತಕಾಲ: 23:22 – 24:58
ಅಭಿಜಿತ್ ಮುಹುರ್ತ: 11:50 – 12:40

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ ತಿಳಿಸಲಾಗುವುದು.

ಸೋಮಶೇಖರ್B.Sc
Mob.93534 88403
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.

ಮೇಷ ರಾಶಿ:
ನಿಮ್ಮ ಎಲ್ಲಾ ಕಾರ್ಯಗಳು ಭಗವಂತನ ಅನುಗ್ರಹದಿಂದ ಸುಲಲಿತವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮನೆ ಮಂದಿಯ ಪ್ರೀತಿ ಸೌಹಾರ್ದತೆಗಳು ನಿಮ್ಮನ್ನು ಬೆರಗುಗೊಳಿಸುತ್ತವೆ. ಕೆಲವರು ಬೆಲೆಬಾಳುವ ವಸ್ತುಗಳ ಖರೀದಿಗೆ ಮುಂದಾಗುವರು. ಮನೆಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಗಳು ನಿಮಗೆ ತೃಪ್ತಿಯನ್ನು ನೀಡುವುದು. ಮಗನ ಮದುವೆಯ ವಿಚಾರವಾಗಿ ಹೆಚ್ಚು ಆಸಕ್ತರಾಗುವಿರಿ. ಅಂತೆಯೆ ಕೆಲ ಕನ್ಯಾ ಪಿತೃಗಳು ನಿಮ್ಮನ್ನು ಸಂಪರ್ಕಿಸುವರು. ಗುರು,ಹಿರಿಯರ ಆಶೀರ್ವಾದವಿದೆಯೆಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ದುರಾಸೆಯನ್ನು ಅಭಿವ್ಯಕ್ತಿಗೊಳಿಸುವುದು
ಸೋಮಶೇಖರ್B.Sc
Mob.93534 88403

ವೃಷಭ ರಾಶಿ:-
ನೀವು ಸಾಮಾಜಿಕವಾಗಿ ನಡೆಸಲಿರುವಂತಹ ಚಟುವಟಿಕೆಗಳಿಂದ ಒತ್ತಡವಿದ್ದರು ಅದು ಸಂತೋಷವನ್ನುಂಟು ಮಾಡುವುದು. ಜ್ಞಾನದ ಸಂವರ್ಧನೆಗಳಿಗಾಗಿ ಪ್ರವಾಸವನ್ನು ಕೈಗೊಳ್ಳುವಿರಿ. ಇದಕ್ಕೆ ಪೂರಕವಾಗಿ ಹಣಕಾಸು ಬರುವುದು. ವಾಹನಗಳನ್ನು ಓಡಿಸುವಾಗ ಹೆಚ್ಚಿನ ಕಾಳಜಿ ಇರಲಿ. ನಿರ್ಲಕ್ಷ ವಹಿಸಿದರೆ ತೊಂದರೆಗಳು ಹೆಚ್ಚು. ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ ಕಂಡು ಬರುವುದು. ಗುರುರಾಯರ ಸ್ಮರಿಸಿ ದಿನವನ್ನು ಆರಂಭಿಸಿ. ಸದಾ ಪಾದರಸದಂತೆ ಚುರುಕಾಗಿರುವ ನಿಮ್ಮನ್ನು ಕಂಡು ಹಲವರಿಗೆ ಅಚ್ಚರಿ. ನಿಮ್ಮ ಈ ಉತ್ಸಾಹಶೀಲತೆಯನ್ನು ಮೆಚ್ಚಿ ಹಲವರಿಂದ ಪ್ರಶಂಸೆಗೆ ಒಳಗಾಗುವಿರಿ.
ಸೋಮಶೇಖರ್B.Sc
Mob.93534 88403

ಮಿಥುನ ರಾಶಿ:-
ಉನ್ನತ ಸ್ಥಾನದಲ್ಲಿ ಕೆಲಸ ಮಾಡುವ ನೀವು ಕೆಲವು ವೇಳೆ ಘನತೆ, ಗಾಂಭೀರ‍್ಯ ಪ್ರದರ್ಶಿಸಬೇಕಾಗುವುದು. ಹಾಗಾಗಿ ಸಹೋದ್ಯೋಗಿಗಳ ಜೊತೆ ಮತ್ತು ನಿಮ್ಮ ಕೈಕೆಳಗಿನವರ ಜೊತೆ ಸಲುಗೆ ಬೇಡ. ಮನೆಯಲ್ಲಿ ಮತ್ತು ಕಚೇರಿಯಲ್ಲಿ ಕೆಲವು ಅನಪೇಕ್ಷಿತ ಘಟನೆಗಳಿಂದ ಮನಸ್ಸಿಗೆ ಕಿರಿಕಿರಿ ಆಗುವುದು. ಕುಲದೇವತಾ ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಸರ್ಕಾರಿ ಕೆಲಸದಲ್ಲಿದ್ದವರಿಗೆ ಪದೋನ್ನತಿ ಇದೆ. ಕೋರ್ಟು ಕಚೇರಿಯ ವ್ಯಾಜ್ಯಗಳಲ್ಲಿ ಯಶಸ್ಸು ನಿಮ್ಮದಾಗುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಉಂಟಾಗುವುದು.
ಸೋಮಶೇಖರ್B.Sc
Mob.93534 88403

ಕರ್ಕ ರಾಶಿ:
ಅನೇಕ ರೀತಿಯ ಜನರನ್ನು ಭೇಟಿಯಾಗುವ ಸಂದರ್ಭದಲ್ಲಿ ಅಪರಿಚಿತರಿಂದ ಮೋಸ ಹೋಗದಿರಿ. ಜಾಗ್ರತೆ. ನಿಮ್ಮ ಪಾಲಿಗೆ ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಲಾಭಗಳಿಗೆ ವಿನೂತನವಾದ ದಾರಿಯೊಂದು ಸಿಗಲಿದೆ. ನೀವು ಧೈರ್ಯವನ್ನು ಕಳೆದುಕೊಳ್ಳುವಂತೆ ನಯವಂಚಕರು ಹಲವು ರೀತಿಯ ಮಸಲತ್ತು ನಡೆಸಬಹುದು. ಯಾವುದೇ ಸಮಸ್ಯೆ ಬರಲಿ, ಅದನ್ನು ಬಾಳಸಂಗಾತಿಯ ಜತೆಯಲ್ಲಿ ಚರ್ಚೆ ನಡೆಸುವುದು ಉತ್ತಮವಾಗಿದೆ. ವಿದೇಶಕ್ಕೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯಲಿರುವ ವಿಚಾರದಲ್ಲಿ ವಿನೂತನವಾದ ಬೆಳಕು ಕಾಣಸಿಗಲಿದೆ. ಹೊರಗಿನ ಆಹಾರ, ತಿಂಡಿ ತಿನಿಸುಗಳ ಬಗೆಗೆ ಎಚ್ಚರ ಇರಲಿ.
ಸೋಮಶೇಖರ್B.Sc
Mob.93534 88403

ಸಿಂಹರಾಶಿ:

ನೆರೆಹೊರೆಯವರಲ್ಲಿ ನಿಮ್ಮ ಬಗೆಗಿನ ಗೌರವಾದರಗಳಿಗೆ ಹೆಚ್ಚಿನ ಪ್ರಾಧಾನ್ಯ ದೊರೆಯುವುದು. ಪರರಿಗೆ ಉಪಕಾರ ಮಾಡುವ ಬುದ್ಧಿಯು ನಿಮ್ಮಲ್ಲಿ ಸದಾ ಜಾಗೃತವಾಗಿರುವುದು. ಇದಕ್ಕೆ ಪೂರಕವಾಗಿ ಧನಕಾರಕ ಗುರುವು ನಿಮ್ಮ ಸಹಾಯಕ್ಕೆ ಇರುವರು. ಸುಸ್ತು, ಮೈಕೈನೋವು, ಏನೋ ಚಿಕ್ಕದು ಎಂದು ಅಲಕ್ಷಿಸಬೇಡಿ. ಹಾಗಂತ ನೀವೇ ಸ್ವಯಂ ವೈದ್ಯಕೀಯವನ್ನು ಮಾಡಿಕೊಳ್ಳದೆ ಸೂಕ್ತ ವೈದ್ಯರ ಸಲಹೆಯ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳಿ. ಮನಸ್ಸಿನ ಚಂಚಲತೆ ನಿವಾರಣೆಗಾಗಿ ಈಶ್ವರನ ಆರಾಧನೆ ಮಾಡಿ. ಅನಿರೀಕ್ಷಿತವಾದ ಬೆಳವಣಿಗೆಯೊಂದರಲ್ಲಿ ಅಸಾಧ್ಯವಾದ ಸ್ನೇಹ ಕುದುರುವಂತಹದು.
ಸೋಮಶೇಖರ್B.Sc
Mob.93534 88403

ಕನ್ಯಾ ರಾಶಿ:-
ಮಾನಸಿಕ ದೃಢತೆಯನ್ನು ಸಂಪಾದಿಸಿಕೊಳ್ಳಿ. ನಿಮ್ಮ ಎಲ್ಲಾ ಕಾರ್ಯಗಳು ಭಗವಂತನ ಅನುಗ್ರಹದಿಂದ ಸುಲಲಿತವಾಗುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮನೆ ಮಂದಿಯ ಪ್ರೀತಿ ಸೌಹಾರ್ದತೆ ನಿಮ್ಮನ್ನು ಬೆರಗುಗೊಳಿಸುತ್ತವೆ.
ನಿಮ್ಮಲ್ಲಿ ಕೆಲವರು ಬೆಲೆಬಾಳುವ ವಸ್ತುಗಳ ಖರೀದಿಗೆ ಮುಂದಾಗುವರು.ಮನೆಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಗಳು ನಿಮಗೆ ತೃಪ್ತಿ ನೀಡುವವು. ಮಗನ ಮದುವೆ ವಿಚಾರವಾಗಿ ಹೆಚ್ಚು ಆಸಕ್ತರಾಗುವಿರಿ. ಅಂತೆಯೆ ಕೆಲ ಕನ್ಯಾ ಪಿತೃಗಳು ನಿಮ್ಮನ್ನು ಸಂಪರ್ಕಿಸುವರು. ಗುರು ಹಿರಿಯರ ಆಶೀರ್ವಾದವಿದೆಯೆಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ದುರಾಸೆ ಇಂದ ತೊಂದರೆ.
ಸೋಮಶೇಖರ್B.Sc
Mob.93534 88403

ತುಲಾ ರಾಶಿ:-
ಹಲವಾರು ಯೋಜನೆಗಳನ್ನು ಹಾಕಿಕೊಳ್ಳುವ ಹಳೆಯ ಚಾಳಿ ಶುರು ಮಾಡದಿರಿ. ಅದಕ್ಕೆ ಇನ್ನು ಕಾಲ ಪಕ್ವವಾಗಿಲ್ಲ. ಸದ್ಯದರಲ್ಲಿಯೇ ಒಂದು ಮಹಾಯುದ್ಧದಲ್ಲಿ ಗೆಲ್ಲಬೇಕಿದೆ. ಆ ಬಗ್ಗೆ ಚಿಂತಿಸಿ ಕಾರ್ಯ ಪ್ರವೃತ್ತರಾಗಿ.
ಮಕ್ಕಳಿಂದ ಸಂತೋಷದ ವಾರ್ತೆ ಇದೆ. ನಿಮ್ಮ ಮಾರ್ಗದರ್ಶನವೂ ಸೂಕ್ತವಾಗಿ ಸಿಗಲಿ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಮನೆ ಮಂದಿಯೆಲ್ಲಾ ಒಟ್ಟಾಗಿ ಕುಲದೇವತಾ ಪ್ರಾರ್ಥನೆ ಮಾಡಿ. ಮಾತಿನ ಚಾತುರ್ಯ ಇದ್ದರೂ ಸುಮ್ಮನೆ ಮೌನ ವಹಿಸುವುದು ಉತ್ತಮ.
ಸೋಮಶೇಖರ್B.Sc
Mob.93534 88403

ವೃಶ್ಚಿಕ ರಾಶಿ:-
ಬಂಧುಮಿತ್ರರ ಆಗಮನದಿಂದ ಮನೋಲ್ಲಾಸ, ಮನಸ್ಸಿಗೆ ಸಂತೋಷ ಉಂಟಾಗುವುದು. ನಿಮ್ಮಲ್ಲಿನ ಆಶಾವಾದ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿ ಮಾಡುವುದು. ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಒದಗಿ ಬರುವುದು. ಹಮ್ಮಿಕೊಂಡ ಕಾರ್ಯಗಳು ದೈವಾನುಗ್ರಹದಿಂದ ಪೂರ್ಣಗೊಳ್ಳುವುದು. ನಾಲಿಗೆ ಒಳ್ಳೆದಿದ್ದರೆ ನಾಡೇ ಒಳ್ಳೆಯದು ಎನ್ನುವಂತೆ ನೀವು ಆಡುವ ಮಾತುಗಳ ಬಗ್ಗೆ ಎಚ್ಚರವಿರಲಿ. ಮುಂಜಾನೆಯ ಮೂಡು ಸರಿ ಇಲ್ಲದಿರುವ ಸಾದ್ಯತೆ. ಆದರೆ ಮಧ್ಯಾಹ್ನ ನಂತರ ಒಳ್ಳೆಯದಾಗುವುದು. ಧನಾತ್ಮಕ ಚಿಂತನೆ ಯಶಸ್ಸನ್ನು ನಿಮ್ಮದಾಗಿಸುತ್ತದೆ. ವಿರೋಧಿಗಳಿಗೆ ಸೋಲು.
ಸೋಮಶೇಖರ್B.Sc
Mob.93534 88403

ಧನಸ್ಸು ರಾಶಿ:
ಸಮೃದ್ಧಿಯ ಜೀವನ. ಆರೋಗ್ಯದಲ್ಲಿ ಸುಧಾರಣೆ. ಹೊಸ ವಾಹನ ,ಹೊಸ ಮನೆ ಕಟ್ಟಡ ಯಶಸ್ಸು. ಪ್ರೇಮಿಗಳಿಗೆ ಸಂತಸದ ಸುದ್ದಿ. ನಿರುದ್ಯೋಗಿಗಳಿಗೆ ಉದ್ಯೋಗದ ಭಾಗ್ಯ. ಪಿತ್ರಾರ್ಜಿತ ಆಸ್ತಿಯ ಗೊಂದಲ ನಿವಾರಣೆಯಾಗಲಿದೆ. ಸಾಲ ತೀರಿಸುವದರಲ್ಲಿ ಪ್ರಗತಿ ಕಾಣುವಿರಿ. ಹೊಸ ಉದ್ಯಮ ಪ್ರಾರಂಭ ಯಶಸ್ಸು. ನಿಂತುಹೋದ ಮದುವೆ ಕಾರ್ಯಗಳು ಮರು ಭಾಗ್ಯ ಸಿಗಲಿದೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿ. ಶತ್ರುಗಳು ತಣ್ಣಗಾಗುವರು. ಭೂಮಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗಲಿದೆ. ಸಂತಾನ ಪ್ರಾಪ್ತಿ. ತಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ.
“ಲಕ್ಷ್ಮಿ ಪೂಜೆ” ಮಾಡಿರಿ.
ಸೋಮಶೇಖರ್B.Sc
Mob.93534 88403

ಮಕರ ರಾಶಿ:
ಮಕ್ಕಳ ವಿದ್ಯಾಭ್ಯಾಸ ಹಾಗು ಅವರ ಭವಿಷ್ಯದ ಚಿಂತನೆ. ಪ್ರಯಾಣದ ಬಗ್ಗೆ ಎಚ್ಚರವಿರಲಿ. ಮಾಡುವಂತ ಕೆಲಸದಲ್ಲಿ ಎಚ್ಚರವಿರಲಿ, ಯಾರು ಮಾಡಿರುವಂತಹ ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಹೊಸ ಕೆಲಸ ಹುಡುಕಾಟ ಮಾಡುವವರಿಗೆ ಶ್ರಮ ಪಡಲೇಬೇಕು. ವಾಹನ ಸವಾರಿ ಮಾಡುವಾಗ ಎಚ್ಚರವಿರಲಿ. ಪರಸ್ಪರ ಪ್ರೀತಿಸಿ ಮದುವೆಯಾದವರು ಗೋಳಾಟ ಅನುಭವಿಸುವಿರಿ.
“ಶನೀಶ್ವರ ಸ್ತೋತ್ರ” ಪಠಿಸಿರಿ
ಸೋಮಶೇಖರ್B.Sc
Mob.93534 88403

ಕುಂಭ ರಾಶಿ:
ಕೊಂಚ ನೆಮ್ಮದಿ ಸಿಗಲಿದೆ. ಬಹುದಿನದ ಬೇಡಿಕೆ ಇಂದು ಯಶಸ್ಸು. ಪತ್ನಿಯ ಸಹಾಯ ಹಾಗೂ ಮಾರ್ಗದರ್ಶನದಲ್ಲಿ ತಮ್ಮ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ಸಾಡೇಸಾತಿ ಶನಿ ಪ್ರಭಾವ ಶಾಂತವಾಗಲಿದೆ. ದೂರದ ಪ್ರಯಾಣ ಬೇಡವೇಬೇಡ. ಆರೋಗ್ಯದ ಕಡೆ ಗಮನವಿರಲಿ. ನಿಮ್ಮ ಕಾಲುಗಳ ಮೇಲೆ ನಿಗಾ ಇರಲಿ. ಉದ್ಯೋಗಿಗಳು ಎಚ್ಚರದಿಂದ ಇರಬೇಕು. ಶನಿ ತಮಗೆ ಕೊಂಚ ಧೈರ್ಯ ಕೊಡುತ್ತಾನೆ. ಉದರ ಸಂಬಂಧಿಸಿದ ಕಾಯಿಲೆ ವೈದ್ಯರ ಸಲಹೆ ಪಡೆದು ಔಷದೋಪಚಾರ ಮಾಡಿಸಿದರೆ ಒಳಿತು.
“ಮಹಾ ಮೃತ್ಯುಂಜಯ” ಜಪ ಪಠಿಸಿ.
ಸೋಮಶೇಖರ್B.Sc
Mob.93534 88403

ಮೀನಾ ರಾಶಿ:
ಇಂದು ಮಿಶ್ರಫಲ ಅನುಭವಿಸುವಿರಿ. ಮನೆಯಲ್ಲಿ ತಿರುಗುವಾಗ, ಹೊರಗಡೆ ತಿರುಗುವಾಗ ತಮ್ಮ ಸಾಲುಗಳ ಬಗ್ಗೆ ಗಮನವಿರಲಿ. ಸಾಲಭಾದೆಯಿಂದ ತುಂಬಾ ಬೇಸರ. ಎದೆ ನೋವಿನಿಂದ ನರಳುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ. ಬಾಕಿ ಉಳಿದಿರುವ ಎಲ್ಲಾ ಕೆಲಸ ಕಾರ್ಯಗಳು ಯಶಸ್ಸು. ವಿಚ್ಛೇದನದ ಮಗಳ ಮರುಮದುವೆ ಚಿಂತನೆ ಯಶಸ್ಸು.
“ಶಿವ ವಿಷ್ಣು ಸಹಸ್ರನಾಮ” ಪಠಿಸಿರಿ.
ಸೋಮಶೇಖರ್B.Sc
Mob.93534 88403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top