ಹರಪನಹಳ್ಳಿ ಲಂಬಾಣಿ ಸಮುದಾಯದಿಂದ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲೂಕಿನ ಹಾರಕನಾಳು ದೊಡ್ಡ ತಾಂಡ, ಮಾಡಲಗೇರಿ ತಾಂಡ, ಐಗಳ ಬಸಾಪುರ ತಾಂಡ, ಸೇವಾನಗರ ತಾಂಡ, ಬೇವಿನಹಳ್ಳಿ ತಾಂಡ, ಮಾಚಿಹಳ್ಳಿ ತಾಂಡ, ಉದ್ದಗಟ್ಟಿ ತಾಂಡ, ಲಕ್ಷ್ಮೀಪುರ, ಕುಂಚೂರು ಕೆರೆ ತಾಂಡ, ಖಂಡಿಗೇರಿ, ಬೆಂಡಿಗೇರಿ ತಾಂಡ ಸೇರಿದಂತೆ ಬಹುತೇಕ ಎಲ್ಲಾ ತಾಂಡಗಳಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಯುವತಿಯರು ಕಾಡಿಗೆ ತೆರಳಿ ಹೂ ತಂದು ನಂತರ ನೃತ್ಯ ಮಾಡುವ ಮೂಲಕ  ದೀಪಾವಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದ್ರು.

ದೀಪಾವಳಿಯ ಆರಂಭ ದಿನವಾದ ಅಮಾವಾಸ್ಯೆ ದಿನದಂದು ತಾಂಡಗಳಲ್ಲಿರುವ ಎತ್ತುಗಳನ್ನು ಶುಭ್ರವಾಗಿಟ್ಟು, ವಿವಿಧ ಅಕರ್ಷಕ ಬಣ್ಣಗಳಿಂದ ಅಲಂಕಾರ ಮಾಡಿದರು. ನಂತರ ಪ್ರತಿಯೊಂದು ಎತ್ತಿನ ಕೊರಳಲ್ಲಿ ಒಣ ಕೊಬ್ಬರಿಯನ್ನು ಕಟ್ಟಿ ಬೆದರಿಸಿ ಓಡಿಸಲಾಯಿತು. ಅದನ್ನು ಪಳಗಿಸಿ ಹಿಡಿದುಕೊಂಡು ಬಂದ ಯುವಕರಿಗೆ ಗ್ರಾಮಸ್ಥದ ಹಿರಿಯರು ಬಹುಮಾನ ನೀಡಿ ಎಲ್ಲರೆದುರು ಪುರಸ್ಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

deepavali harapabnhalli3

ಮಂಗಳವಾರ ಯವತಿಯರು ಮತ್ತು ಮಹಿಳೆಯರು ಮಡಿಯಿಂದ ಸಿಹಿ ಅಡುಗೆ ತಯಾರಿಸಿದ ನಂತರ ಡಾಲ್ಯ(ಮಾಹಿತಿದಾರ) ಊರಿನ ಗೌಡರ ಸೂಚನೆಯಂತೆ ಹಲಗೆ ಬಡಿಯುವ ಮೂಲಕ ಪ್ರತಿಯೊಂದು
ಮನೆಗಳಿಂದ ಅವಿವಾಹಿತ ಯುವತಿಯರು ಹಟ್ಟಿ ನಾಯಕರ ಮನೆ ಹತ್ತಿರ ಬರಬೇಕು ಎಂದು ಡಂಗೂರ ಸಾರಿದರು. ಯುವತಿಯರು ಹಟ್ಟಿ ನಾಯಕರ ಮನೆ ಬಳಿ ಸೇರಿ ಲಂಬಾಣಿ ಭಾಷೆಯಲ್ಲಿ ಹಾಡು ಹೇಳುತ್ತಾ ಕುಣಿದು ಸಂಭ್ರಮಿಸಿದರು. ನಂತರ ಸಂಜೆ ವೇಳೆ ಹಟ್ಟಿ ಗೌಡರ ಹೆಂಡತಿ ಹಾಗೂ ತಾಂಡದ ಹಿರಿಯರು ಸೇರಿಕೊಂಡು ತಾಂಡದ ಕೊನೆಯ ಭಾಗಕ್ಕೆ ಬಂದು ಹೂವುಗಳನ್ನು ತರಲು ಕಾಡಿಗೆ ತೆರಳುವ ಯುವತಿಯರಿಗೆ ಬೀಳ್ಕೊಟ್ಟರು.

deepavali harapabnhalli5

ಕಾಡಿನಲ್ಲಿ ಸಿಗುವ ಕಣಗಲು(ವಲಾಣ್ಯ) ಹೂ ಕಿತ್ತುಕೊಂಡು ಪುಟ್ಟಿಯಲ್ಲಿಟ್ಟುಕೊಂಡು
ಸಂಪ್ರದಾಯಕ ನೃತ್ಯ ಮಾಡುತ್ತಾ ಶ್ಯಾಲು(ಛಾಟ್ಯಾ) ಹೊದ್ದು ಪುನಃ ತಾಂಡಕ್ಕೆ ಆಗಮಿಸಿದಾಗ
ಪುನಃ ಹಿರಿಯರು ಮತ್ತು ಹಟ್ಟಿ ಗೌಡರು ತಾಂಡ ಗಡಿ ಬಳಿ ಬಂದು ಸ್ವಾಗತಿಸಿಕೊಂಡರು.
ಹೂವಿನ ಪುಟ್ಟಿಗಳನ್ನು ಹೊತ್ತುಕೊಂಡ ಯುವತಿಯರ ಗುಂಪು ತಾಂಡದ ಪ್ರತಿಯೊಂದು ಮನೆಗೂ ತೆರಳಿ ಸಗಣಿಯ ಗುರ್ಚಿಯಲ್ಲಿ ಹೂಗಳನ್ನು ಇಟ್ಟು ಮನೆಗೊಬ್ಬ ಯುವತಿಯರು ದೀಪ ಹಿಡಿದುಕೊಂಡು ಗ್ರಾಮದ ದೇವಾಲಯ ಬಳಿಯಿಟ್ಟು ಪೂಜೆ ಸಲ್ಲಿಸಿ ನಂತರ ಅವರಿಗೆ ಇಷ್ಟವಾದಂತಹ ಮನೆಗಳಿಗೆ ತೆರಳಿ ಮನೆ ಹಾಗೂ ಅವರ ಹೆಸರು ಸೇರಿಸಿಕೊಂಡು ಹಾಡು ಹೇಳುವ ಮೂಲಕ ಶುಭಾಶಯ ಕೋರಿದರು.

‘ಚಿಕ್ಕವರಿಗೂ-ಹಿರಿಯರು ಎಲ್ಲರಿಗೂ ನಮನಗಳು. ಈ ತುಂಬಿದ ಮನೆ ಸದಾ ಹಸಿರಾಗಿರಾಗಿರುವಂತೆ ಸದಾ ನೋಡಿಕೋ’ ಎಂದು ಯುವತಿಯರು ದೇವರಲ್ಲಿ ಪ್ರಾರ್ಥಿಸಿದರು.

ಪುಟ್ಟಿಯಲ್ಲಿ ಹೂವುಗಳನ್ನಿಟ್ಟುಕೊಂಡು ಮಂಡಕ್ಕಿ, ಬಲೂನ್, ರಿಬ್ಬನ್‌ಗಳನ್ನು ಕಟ್ಟಿ
ಅಲಂಕಾರ ಮಾಡಿಕೊಂಡಿದ್ದರು. ಸಂಪ್ರಾದಾಯಕ ಲಂಬಾಣಿ ಸಮುದಾಯದ ಬಟ್ಟೆ ಧರಿಸಿ ತಲೆಯ ಮೇಲೆ ಪುಟ್ಟಿ ಹೊತ್ತುಕೊಂಡು ನೃತ್ಯ ಮಾಡಿದರು. ನಂತರ ಪ್ರಸ್ತಕ ವರ್ಷ ಮದುವೆಯಾಗಿ ತೆರಳುವಂತಹ ಯುವತಿಯರಿಗೆ ಬಳೆ ಬಳುವಳಿಯಾಗಿ ನೀಡುವ ಕಾರ್ಯ ನಡೆಯುವುದರೊಂದಿಗೆ ದೀಪಾವಳಿ ಹಬ್ಬಕ್ಕೆ ತೆರೆ ಬಿತ್ತು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *