ಡಿವಿಜಿ ಸುದ್ದಿ, ದಾವಣಗೆರೆ: 25 ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ರಾಜೇಶ್ ಭರ್ಜರಿ ಪ್ರಚಾರ ನಡೆಸಿದರು. ರೈತ ಮುಖಂಡ ಹಾಗೂ ಜಿಲ್ಲಾ ಪಂಚಾಯತ ಸದಸ್ಯ ತೇಜಸ್ವಿ ಪಟೇಲ್ ರಾಜೇಶ ಪರ ಮತಯಾಚನೆ ಮಾಡಿದರು.
ಡಿವಿಜಿ ಸುದ್ದಿ ಜೊತೆ ಮಾತನಾಡಿದ ಅವರು, ನಾನು ಕೆಬಿ ಬಡಾವಣೆಯ ಮೂಲ ನಿವಾಸಿಯಾಗಿದ್ದು, ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಹೀಗಾಗಿ ಈ ಬಾರಿಯ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಥಳೀಯನಾದ ನನಗೆ ಒಂದು ಅವಕಾಶ ಕಲ್ಪಿಸಿ ಎಂದು ಜೆಡಿಎಸ್ ಅಭ್ಯರ್ಥಿ ರಾಜೇಶ್ ಮನವಿ ಮಾಡಿದರು.
ಸಾಮಾಜಿಕ ಭದ್ರತಾ ಯೋಜನೆ ಅಡಿ ಬರುವ ಸೌಲಭ್ಯಗಳು, ರಸ್ತೆ, ಒಳ ಚರಂಡಿ, ಕುಡಿಯುವ ನೀರು ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದ್ರು.



